ಕನ್ನಡ ವಿಕಿಯಲ್ಲಿ ಟೆಂಪ್ಲೇಟುಗಳು ಮತ್ತು ಮಾಡ್ಯೂಲುಗಳಲ್ಲಿನ ತೊಂದರೆಗಳನ್ನು ನಿವಾರಿಸುವುದು ಕಷ್ಟಕರವಾದ ಕೆಲಸವಾಗಿತ್ತು. ಪ್ರತಿ ಸಾಲಿನಲ್ಲಿ ಬಳಸುವ ಬ್ರಾಕೆಟ್ಟು, ವೇರಿಯಬಲ್ಲುಗಳು ಇತ್ಯಾದಿಗಳ ಪ್ರಾರಂಭ ಮತ್ತು ಕೊನೆ ಹುಡುಕುವುದರಲ್ಲೇ ಹೈರಾಣಾಗುತ್ತಿತ್ತು. ಇದಕ್ಕೆ ಪ್ರೋಗಾಮರುಗಳ ಭಾಷೆಯಲ್ಲಿ “ಇಂಡೆಂಟೇಷನ್” ಸರಿ ಇದ್ದಿದ್ದರೆ ಎಂದು ಅನೇಕರಿಗೆ ಅನಿಸಿರಬಹುದು. ದಿನಾಂಕಗಳಿಗೆ ಸಂಬಂಧಿಸಿದ ಟೆಂಪ್ಲೇಟುಗಳನ್ನು ಸರಿಪಡಿಸುವಾಗ ಹಲವಾರು ಗಂಟೆ ಸಮಯ ವ್ಯಯಿಸಿದ್ದನ್ನು ಇಲ್ಲಿ ನೆನಪಿಸಕೊಳ್ಳಬಯಸುತ್ತೇನೆ.
ಮೊನ್ನೆ ಇದೇ ರೀತಿ ಯೋಗೇಶ್ ಜೊತೆ ಫಿಲ್ಮ್ ಸಂಬಂಧಿತ ಟೆಂಪ್ಲೇಟು ಸರಿಪಡಿಸುವಾಗ ಕಣ್ಣಿಗೆ ಬಿದ್ದ ಸಿಂಟ್ಯಾಕ್ಸ್ ಹೈಲೈಟರ್ ಬಳಸಿ ನೋಡಿ ಅದನ್ನು ಇತರರಿಗೂ ಲಭ್ಯವಾಗುವ ಆಲೋಚನೆ ಹೊಳೆಯಿತು. ಇಂದು ಇದು ಕನ್ನಡ ವಿಕಿಪೀಡಿಯದಲ್ಲಿ ಹಾಗೂ ಕನ್ನಡ ವಿಕಿಸೋರ್ಸ್ ಎರಡರಲ್ಲೂ ಲಭ್ಯವಿದೆ.
ನಿಮ್ಮಖಾತೆಯಲ್ಲಿ ಸಿಂಟ್ಯಾಕ್ಸ್ ಹೈಲೈಟರ್ ಇದ್ದಲ್ಲಿ, ಟೆಂಪ್ಲೇಟುಗಳು ಮೇಲ್ಕಂಡಂತೆ ಕಾಣುತ್ತವೆ.
ನಿಮ್ಮ ಖಾತೆಯಲ್ಲಿ ಈ ಗ್ಯಾಜೆಟ್ ಸಕ್ರಿಯಗೊಳಿಸಲು ಪ್ರಾಶಸ್ತ್ಯಗಳಲ್ಲಿನ ಗ್ಯಾಜೆಟ್ ಟ್ಯಾಬ್ ನೋಡಿ.