ಮೂರು ಚುಟುಕು ಮಾತುಗಳು
ನಿದ್ದೆನಿದ್ದೆ ಬರಲಿ ನಿನಗೆದಿನದ ದಣಿವ ಸರಿಸೆಮಲಗು ಚಿನ್ನ ನೀಹೊದ್ದು ಕನಸ ಹೊದಿಕೆಬೆಳಗು ಸೂರ್ಯ ತಟ್ಟುವ ಕದವಬರುವ ಮುಂಜಾನೆಚುಕ್ಕಿ ಚಂದ್ರಮ ಸರಿದುಬೆಳ್ಳಿ ರೆಕ್ಕೆಯ ತೆರೆದುಕಣ್ರೆಪ್ಪೆ ಹಕ್ಕಿಪಕ್ಕಿಗಳ ಜೊತೆಗೆಸುಪ್ರಭಾತದ ಕರೆಗೆಕಣ್ಣರೆಪ್ಪೆಯ ಸರಿಸಿಜಗವ ಕಾಣೋ...
ಬೆಳ್ಳಕ್ಕಿ
ಹಕ್ಕಿಯಂತೆ ಹಾಡುತಿರುಹಕ್ಕಿಯಂತೆ ಹಾರುತಿರುಹಕ್ಕಿಯಂತೆ ಉಲಿಯುತಿರುಹಕ್ಕಿಯಂತೆ ತೇಲುತಿರುಬಾನ ಚುಕ್ಕಿಯಂತೆ ನೀನುಎಂದಿಗೂ ಮಿನುಗುತಿರು..ರಶ್ಮಿ ಪೈ ಗೆ - ಫೂಲ್ಸ್ ಡೇ ದಿನದ ಶುಭಾಶಯಗಳು .....
ನಿರಂಕುಶ ಪರಿಭ್ರಮಣ
(ಚಿತ್ರ: ಕೊರಮಂಗಲದಲ್ಲಿ ತೆಗೆದದ್ದು, ೨೯ ನೇ ಮಾರ್ಚ್)ಕತ್ತಲೆಯಾದರೂ ಮುಗಿಯದಜೀವನದ ಪಯಣದಲಿಮಂದ ಬೆಳಕಿನ ರಂಗಿನಾಟಬೆಂಬಿಡದ ಗೋಜಲಿನ ನಡುವೆವಿಶ್ವದ ಹೊರೆಯನ್ನೇ ಹೊತ್ತಂತೆ ಬೇಕು ಬೇಡದ ಭೇದದ ನಡುವೆನಮ್ಮ ನಿರಂಕುಶ...
ಹಕ್ಕಿ ನಾನಾಗಬೇಕು
ಸಿಕ್ಕರೆರೆಡು ರೆಕ್ಕೆ ನನಗೆಹಿಗ್ಗು ಬರುವುದುತೋರಲದನು ಜಗಕೆ ನಾನುನಭಕೆ ಜಿಗಿವೆನುಮನುಜ ಮನಸಿಗೆಣೆಯೆ ಹೇಳುಕಷ್ಟವಾವುದು?ಮನಸು ಮಾಡೆ ದಿಕ್ಕು ದೊರಕಿಹಾರಿ...
ಚುನಾವಣೆ
ಚುನಾಯಿತರಾಗಲು ಅನುಯಾಯಿಗಳಕಾಲನಿಡುಯುವ ಕಾಲಅಜ್ಜ ಅಜ್ಜಿಯರಿರಲಿ, ದೊಡ್ಡವರೂ, ಯುವಕ, ಯುವತಿಯರೂಅದೆಲ್ಲ ಬಿಡಿ, ಬಿಟ್ಟಿಲ್ಲ ನಮ್ಮ ಚಿಕ್ಕ ಪುಟ್ಟ ಕಂದಮ್ಮಗಳನ್ನೂಓಟು ಕೊಡಿ.. ಎತ್ತರಿಸಿದ ದನಿಯಲ್ಲಿ ಕೂಗುತ್ತಿರುವಆ ಮೈಕಿನ ಧ್ವನಿಗೆ ಎದೆ ಝಲ್ ಎಂದಿತ್ತುಕೂಗುತ್ತಿದ್ದವರಾರು? ಏನಾಯಿತು ಎನ್ನುವುದರಲ್ಲೇತಿಳಿದದ್ದು, ಅದು ಮಗುವೊಂದರ...
ಹಕ್ಕಿ
ನೀಲಾಕಾಶದ ಜೀವ ಜಾಲಹಾರುತ್ತಲೇ ಸಾರಿದೆ ನೀಜಗಕೆ ಬಾನ ಅಂತರಾಳಚಿತ್ರ:- ಗುರುಪ್ರಸಾದ್, ಶೃಂಗೇರಿ
ಮಗು ನಾನಾಗಬಾರದೇಕೆ?
ಚಿತ್ರ:- ಪವಿತ್ರ ಹೆಚ್ಮಿನುಗು ನಕ್ಷತ್ರಗಳಿವೆಯಲ್ಲಿಶಶಿಯು ಅವುಗಳ ಮಧ್ಯೆಅಲ್ಲೆಲ್ಲೋ ಉದುರಿದಂತೆ ಧೂಮಕೇತುಮನದಲ್ಲಿ ಮಿನುಗಿತು ಸಣ್ಣ ಆಸೆ!ಬೆಳಗ್ಗೆ ಸೂರ್ಯ ಕಣ್ಬಿಡುವಾಗಬೆಳ್ಳಿ ಕಿರಣಗಳ ಪ್ರಭಾವಳಿಯನ್ನುಕೆರೆಯ ಅಂಗಳದಲಿ ಚೆಲ್ಲಿದಾಗಲೇಆ ಒಂದು ಆಸೆ ಮಿಂಚಿತ್ತು!ಮಧ್ಯಾನ್ಹದ ಬಿಡುವಿನ ಸಮಯದಲ್ಲಿದಿನಾ ನನ್ನಿದುರಾಗುತ್ತಿದ್ದಆ...
ವೃಷಸೇನ
ಮಹಾಭಾರತದ ಕುರುಕ್ಷೇತ್ರರಣರಂಗದಲ್ಲಿ ಒಂದು ಪ್ರಸಂಗಕಿನ್ನರರ ಯಕ್ಷಗಾನ ಪ್ರದರ್ಶನವೀರ ವೃಷಸೇನನ ರುದ್ರ ನರ್ತನ!ಸಾರುತ್ತಲೇ ಜನರ ಮನಗೆದ್ದುತಾಯಿಯ ಅಪ್ಪಣೆ ಪಡೆದುಯುದ್ದಕ್ಕೆ ಸಿದ್ದನಾಗಿ ನಿಂತಿದ್ದಾನೆಕರ್ಣನ ಪುತ್ರ ವೃಷ ಸೇನ..ತಂದೆಗಾಗಿ ರಣರಂಗಕ್ಕೆ ನುಗ್ಗಿದಅಭಿಮನ್ಯುವ ಮೀರಿಸಲುತನ್ನ ತಂದೆಯ ಇಷ್ಟಾರ್ಥ...
ಗುಡುಗು
ನಡುರಾತ್ರಿಯಲ್ಲಿ ,ಕಿಟಕಿಯ ಪಕ್ಕದಲ್ಲಿಸುಂಯ್ ಎಂದು ಗಾಳಿ ಬೀಸಿದಾಗಅದೆಲ್ಲೋ ಸಿಡಿಲು ಬಡಿದಾಗ ಹಾಗೇ ನನ್ನ ಮನದಲ್ಲಿನ ಪುಟ್ಟದೊಂದು ಕೋಣೆಯಾಗೆಮಗುವಿನಂತೆ ಸಣ್ಣ ಹೆದರಿಕೆ...ಹೆದರಿದ್ದು ಸಮಯಕ್ಕೋಇಲ್ಲ ಅದೆಲ್ಲೋ ಗುಡುಗಿದ -- ಗುಡುಗಿಗೋ --ಗುಡುಗಿದ್ದು... ಬಾಸ್ ಆಗಿದ್ದರೆ...- ಫೋನ್ ಸಿಚ್ ಆಫ್ ಮಾಡಿ- ಆಫ್ ಲೈನ್ ಹೋಗಿಗುಡುಗಿದ್ದು...
ಹೀಗೂ ಉಂಟು
ತಲೆಗೆರಡು ಪ್ರಶ್ನೆ ಕಣ್‌ಗೆರೆಡು ಸ್ಕ್ರೀನು ಕುಟ್ಲಿಕ್ಕೆ ಕೀಲಿಮಣೆ ಕೈಗೊಂದು ಇಲಿಮರಿ ಇರಲಿಕ್ಕೆ ಸಾಕು ದಿನ ಮುಗಿದು ಬೆಳಗಾಗುವುದು - ಐ.ಟಿ...
ಅಭ್ಯಂಜನ ತೈಲದಬ್ಯಂಜನ
ಅಭ್ಯಂಜನ ತೈಲದಬ್ಯಂಜನಹೊಸ ವರುಷದ ಹೊಸ ದಿನದಲಿಜಿಡ್ಡಿನಿಂದಲೇ ಜಿಡ್ದ ತೆಗೆಯುವಜಿದ್ದಿನಾಟದ ಅಭ್ಯಂಜನಚಿಕ್ಕಂದಿನ ಅಭ್ಯಂಜನದ ಆ ಕೆಲ ಕ್ಷಣಗಳು -- ಎದ್ದೊಡನೆ ಅಮ್ಮ ಎಣ್ಣೆ ಹಚ್ಚಿ,ಬೇವಿನ ಎಲೆ ಬೆರೆಸಿ ಬಿಸಿನೀರ ಕೊಡದಿಂದತಲೆ ಮೇಲೆ ನೀರು ಸುರಿಯುವಾಗಿನ ಸಂದರ್ಭನೆನೆದು ಓಡಿದ್ದುತಪ್ಪಿಸ್ಕೊಳ್ಳಲಾರದೆ, ಎಣ್ಣೆ ಹಚ್ಚಿಸಿ ಕೊಂಡ...
ಯುಗಾದಿ
ವರುಷ ವರುಷಕೂ ಬರುವ ಯುಗಾದಿನನಗೊಂದಿಷ್ಟು ಹೊಸ ಕನಸುಗಳನೆಯ್ದು ಕೊಡು ಯುಗಾದಿಹೊಸ ದಿರಿಸ ತೊಟ್ಟ ಆ ಮಗುವಿನನಗು ಎಲ್ಲರನ್ನೂ ನಗಿಸುವಂತೆ ನಗುವಿನ ಬುತ್ತಿ ಕಟ್ಟಿ ಕೊಡು ನನಗೆಪ್ರತಿವರ್ಷ ನೀನು ಬರುವಾಗಹೊತ್ತು ತರುವ ಆ ಸಂತೋಷವರ್ಷವಿಡೀ ಇರಲಿ ಹಾಗೆಸಂತೆಯಲಿ ತುಂಬಿ ತುಳುಕುವಆ ಹೂವ ಪರಿಮಳ ವರುಷ ಪೂರಾಕಂಪ ತರಲಿ ನಮ್ಮೆಲ್ಲರ ಬಾಳಲ್ಲಿ...
ಪೇಪರ್ ದೋಣಿ
ಚಿತ್ರಗಳು: ಪವಿತ್ರ ಅಲೆಗಳ ಮೇಲೆ ತೇಲುತ ಬಂತು ನೆನಪಿನ ಸೆರಗನು ಸರಿಸುತ ಬಂತುಮಗುವಿನ ಮನಸನು ತಣಿಸಲು ಬಂತುಊರಿಗೆ ನನ್ನನು ಒಯ್ಯುವೆನೆಂತುಕಾಗದದಲ್ಲಿ ಮಾಡಿದ ದೋಣಿಪುಸ್ತಕದಾಳೆಯ ನೆನಪಿನ ದೋಣಿರಜೆಯಲಿ ಮಜವ ತಂದ ದೋಣಿಹರಿವ ನೀರಲಿ ತೇಲುವ ದೋಣಿಮಕ್ಕಳ ಸಂಗ ಕೂಡಿ ನೋಡುಪೇಪರ್ ದೋಣಿಯ ಮಾಡಿ ನೋಡುರಸ್ತೆಯ ಮಧ್ಯೆ ಹರಿಯುವ...
ಬೆಳಗು ಜಗವ
ಹಳೆಯ ಪುಟವ ತಿರುವಿ ನೀನುಕಲಿ ಇಂದು ಹೊಸದು ವಿಷಯತಿಳಿವ ತಿಳಿದು ಜಗದಿ ನೀನುಬೆಳಗು ಕಲಿಯದವರ ಜಗವ
ನಕ್ಷತ್ರಗಳು ಕಾಣೆಯಾದಾಗ!
ಇರುಳ ಬಾನ ನೋಡಿದಾಗಎತ್ತ ನೋಡು ಕಪ್ಪು ಛಾಯೆಕಾಣದಾಯ್ತು ಚುಕ್ಕಿ ಗುಂಪುಯಾರು ಕದ್ದರೋ? ಕತ್ತಲಲ್ಲೂ ಹತ್ತು ದೀಪಬೆಳಗಿ ಬೆಳಗಿ ಕತ್ತಲನ್ನುಹೊಸಕಿ ಹಾಕಿ ಕುಳಿತರವರುಅವರೆ ಕದ್ದರೋ? ಕತ್ತಲೆಯ ಕತ್ತಲಲ್ಲಿಎಣಿಸುತ್ತಿದ್ದೆ ಚುಕ್ಕಿಗಳನುಲೆಕ್ಕ ತಪ್ಪಿ ಹೋಯಿತಿಂದುಎಂತ ಮಾಡಲೋ?ನನ್ನದೊಂದು ಚಿಕ್ಕ ದಾವೆಹೂಡಲೊರಟು ಬೆಚ್ಚಿ ನಿಂತೆಹುಡುಕಿಕೊಡಿ...
ತಂಗಾಳಿ
ಸಂಜೆಯ ಆ ತಂಗಾಳಿನನ್ನ ಕೆನ್ನೆ ಸವರಿತ್ತುಒಳಗಿನ ಏರ್ ಕಂಡಿಷನ್ ನನ್ನ ಹೊಸಕಿ ಹಾಕಿದಾಗಕಾರಿನ ಕಿಟಕಿಯ ಹೊರಗೆ ಮುಖವಿಟ್ಟಾಗ ರಾಚಿದತಂಗಾಳಿಯ ತಂಪಿಗೆನನ್ನ ಕೆನ್ನೆಯೂ ಕೆಂಪೇರಿತ್ತುವೇಗದ ಮಿತಿಯ ಒಳಗೇಮಿತಿ ಮೀರಿದ ಕನಸುಗಳಇತಿಮಿತಿಯಿಲ್ಲದ ಆಟದಲ್ಲಿತಂಗಾಳಿ ನನ್ನ ಎಚ್ಚರಿಸಿತ್ತು-- ನನ್ನ...
ಗೆಳತಿ
ಬದುಕಿನ ಅನೇಕ ಮಜಲುಗಳಲ್ಲಿಬದುಕುವ ಹಂಬಲದಲ್ಲಿರುವವನಿಗೆಗೆಳತಿಯೋ, ಅಮ್ಮನೋ, ಹೆಂಡತಿಯೋ,ಅಕ್ಕನೋ, ತಂಗಿಯೋ ಆಗಿವಿಭಿನ್ನ ರೂಪಗಳಲ್ಲಿ ಜೊತೆಯಾಗಿಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನಲೋಕದವರೆಗಿನ ಸುಖ ದು:ಖದ ದಾರಿಯೊಳಗಣ ಸರಾಗವಾಗಿ ಸಾಥ್ ಕೊಡುವ ನಿನಗೆ ಪದಗಳಲ್ಲಿ ಹೇಳಲಾಗದಷ್ಟು ಹೆಚ್ಚಿನ...
ನನ್ನಲ್ಲಿನ ಆ ನಾನು
ನನ್ನಲ್ಲಿನ ಆ ನಾನು ಸಂಕೋಚದ ಮುದ್ದೆಯಾಗಿಮನಸಿನ ಒಳಗಿನದ್ದನ್ನುಹೊರಗಿನ ಪ್ರಪಂಚಕ್ಕೆಸರಾಗವಾಗಿ ಪಿಸುಗುಡುವಬದಲು ಅಂಜಿಕೆಯಿಂದ ನನ್ನದೇ ಲೆಕ್ಕಾಚಾರದಪ್ರಪಂಚವ ಕಟ್ಟಿಕೊಂಡು ಶೂನ್ಯದಲ್ಲೇ ವಿಹರಿಸುವತನ್ನನ್ನು ತಾನೇ ತಾನಾಗಿ ಕಲ್ಪಿಸಿಕೊಳ್ವ ಕಲ್ಪನಾಲೋಕದಸಂಚಾರಿಯಾಗಿ ಲೋಕದ ನಡುವೆ ಹೆಸರಿದ್ದೂ ನಾನೊಬ್ಬ ಅನಾಮಧೇಯ... ಅನುಭವವಿದ್ದೂ...



