ಮನಸ್ಸು ಹ್ಯಾಕ್ ಆದಾಗ..
ಹಕ್ಕಿಯಂತೆ ಪಟಪಟ ರೆಕ್ಕೆ ಬಡಿಯುತ್ತಾ
ಹಾರುತ್ತ, ಕುಣಿಯುತ್ತಾ, ಏನೋ ಕಳೆದು ಕೊಂಡಂತೆ
ಎಲ್ಲಿ ಏನಾಯ್ತೋ ಎಂದು ಸುಸ್ತಾಗಿ ಕುಳಿತದ್ದಿದೆ.

ಹ್ಯಾಕ್ ಹಾಗದ ಹಾಗೆ ತಡೀಲಿಕ್ಕೆ….
ಕಂಪ್ಯೂಟರ್ಗೇ ಗೂಡ್ ಕಟ್ಲಾ,
ಇಲ್ಲಾ ಬೇಲಿ ಹಾಕ್ಲಾ ಅಂದ್ರೆ..
ಅದೇನು ಬರೀ ಹಕ್ಕೀನಾ?

ಹ್ಯಾಕ್ ಆದ್ಮೇಲೆ, ಯಾರು ಹ್ಯಾಕ್ ಮಾಡಿದ್ರು?
ಹೆಂಗೆ ಹ್ಯಾಕ್ ಮಾಡಿದ್ರು? ಅವರ ಉದ್ದೇಶ ಏನು?
ಅವರಿಗೇನು ಲಾಭ? ನನಗೆ ಆದ ನಷ್ಟ ಏನು?
ಯೋಚಿಸಿ ಯೋಚಿಸಿ ಮನಸ್ಸೇ ಕಾಣೆಯಾದದ್ದು – ನನಗಾದ ನಷ್ಟ

ಮನಸ್ಸನ್ನು ಹೀಗೆ ಹ್ಯಾಕ್ ಮಾಡಿ ಕದ್ದೊರ್ ಸಿಕ್ರೆ,
ಏನ್ ಶಿಕ್ಷೆ ಕೊಡೋದು…
ಮನಸ್ಸಿಗೆ ತೊಂದ್ರೆ ಕೊಟ್ರೆ ಅವರು ಕ್ರಾಕರ್ ಆಗ್ತಾರಲ್ವಾ?
ಆಗ ತೊಂದ್ರೆ ಇನ್ನೂ ನನಗೇ ಜ್ಯಾಸ್ತಿ ಅಲ್ವಾ?

ಕೊಸರು– ಹ್ಯಾಕ್ ಮಾಡೊದ್ ಯಾಕ್ ಬೇಕಿತ್ತು… ಡೈರೆಕ್ಟಾಗೇ ಹೇಳ್ಬಹುದಿತ್ತಲ್ವಾ – ಅವರ ಮನಸ್ಸಿಗೆ ನನ್ನಿಂದೇನಾಗ್ಬೇಕಿತ್ತಂತ…