ಅಭ್ಯಂಜನ ತೈಲದಬ್ಯಂಜನ
ಹೊಸ ವರುಷದ ಹೊಸ ದಿನದಲಿ
ಜಿಡ್ಡಿನಿಂದಲೇ ಜಿಡ್ದ ತೆಗೆಯುವ
ಜಿದ್ದಿನಾಟದ ಅಭ್ಯಂಜನ
ಚಿಕ್ಕಂದಿನ ಅಭ್ಯಂಜನದ ಆ ಕೆಲ ಕ್ಷಣಗಳು —
ಎದ್ದೊಡನೆ ಅಮ್ಮ ಎಣ್ಣೆ ಹಚ್ಚಿ,
ಬೇವಿನ ಎಲೆ ಬೆರೆಸಿ ಬಿಸಿನೀರ ಕೊಡದಿಂದ
ತಲೆ ಮೇಲೆ ನೀರು ಸುರಿಯುವಾಗಿನ ಸಂದರ್ಭ
ನೆನೆದು ಓಡಿದ್ದು
ತಪ್ಪಿಸ್ಕೊಳ್ಳಲಾರದೆ, ಎಣ್ಣೆ ಹಚ್ಚಿಸಿ ಕೊಂಡ ನಂತರ
ಫೈಲ್ವಾನನಂತೆ ಸೀಗೇಕಾಯಿ ಬೇಡವೆಂದು
ಜಿದ್ದಿನಿಂದಗುದ್ದಾಡಿದ್ದು
ಹೊರಬಂದಾಕ್ಷಣ ಸಿಗುತ್ತಿದ್ದ ಬಣ್ಣದ
ಹೊಸ ಬಟ್ಟೆಯ ಆಸೆಗೆ ಸೋತು ಉರಿಯುತ್ತಿದ್ದ
ಕಣ್ ಮಿಟುಕಿಸಿ ಕಾದಿದ್ದು..
ನಿವಾರಣೆಯಾಗಲಿ ವಾತಾದಿದೋಷಗಳು
ಆಯುರಾರೋಗ್ಯ ವೃದ್ದಿಸಲಿ
ಪುಷ್ಕಳ ಜಳಕದಲ್ಲಿ ಪ್ರಸನ್ನತೆಯ ಸುಖದೊರೆತು
ಸೌಂದರ್ಯ ವೃದ್ದಿಸಲಿ ತೈಲದ ಅಭ್ಯಂಜನದಿಂದ
ಹೀಗೆ ಯಾವ ಜಿದ್ದಿಗೂ ಜಗ್ಗದೆ, ಜಿದ್ದಿನಲ್ಲೇ
ಮತ್ತೊಂದಿಷ್ಟು ಸಾಲುಗಳಲ್ಲಿ ಏಕೆ ಅಭ್ಯಂಜನ
ಅನ್ನೊದನ್ನು ಸಾರಿ ಸಾರಿ ದೊಡ್ಡವರಿಂದ ಹೇಳಿಸುತ್ತಿತ್ತು..