ಕಳೆದ ದಿನಗಳ ಹಳೆಯ
ನೆನಪುಗಳ ನೆನೆನೆನೆದು
ನೀರಿನೆಲೆಯ ಸೆಳೆತಕೆ
ಕಳೆದು ಹೋಗುತಲಿಹಳು

ತನ್ನ ಇನಿಯನ ಮನೆಯ
ಆ ದಡವ  ಸೇರುವುದು
ಹೇಗೆಂದು ಚಿಂತಿಸುತ
ಕಾಲ ಕಳೆದಿಹಳು

ಈ ಸಂಜೆಗತ್ತಲಲಿ
ನೀರ ಜೊತೆ ನೀರೆಯ
ಹತ್ತಾರು ಮಾತುಕತೆ
ಮನೆಯ  ಮಾಡಿಹುದು

ತಂಗಾಳಿ ಜೊತೆ ಸೇರಿ
ಹಾರುವದೋ, ಇಲ್ಲ..
ಆ ಮೀನ ಜೊತೆಗೆ
ಈಜಲೆಣಿಸಲೊ ನಾನು?

ಪ್ರಶ್ನೆಗಳ ಉತ್ತರಿಸೆ
ಕನಸಲಿ ತಾ ಬಂದು
ತನ್ನ ಮನೆಗೆನ್ನ ಕರೆದೊಯ್ಯ
ಬಹುದೇ ಗೆಳೆಯ?

– ಕಾವೇರಿಯ ದಡದಲ್ಲಿ ಕುಳಿತರೆ  ಇನ್ನೂ ನೂರು ಆಲೋಚನೆಗಳು ನಿಮ್ಮಲ್ಲೂ ಮನೆಮಾಡಬಹುದಲ್ಲ…

ಚಿತ್ರ:- ಪೃಥ್ವಿ – ವಿಜಯ್ ಶಂಕರ್ ಅಲ್ಬಂ ನಿಂದ