ಮೊಬೈಲ್ ಬ್ರೌಸರ್‌ ಮೂಲಕ ಈಗಾಗಲೇ ವಿಕಿಪೀಡಿಯ ಎಡಿಟ್ ಮಾಡಲು ನೀವು ಪ್ರಯತ್ನ ಪಟ್ಟಿರಬಹುದು. ಆದರೆ ಈಗ ವಿಕಿಮೀಡಿಯ ಫೌಂಡೇಷನ್‌ ಅಭಿವೃದ್ದಿ ಪಡಿಸಿರುವ ವಿಕಿಪೀಡಿಯ ಆಂಡ್ರಾಯ್ಡ್  (ಬೀಟಾ) ಅಪ್ಲಿಕೇಷನ್ ಮೂಲಕ ಕೂಡ ವಿಕಿಪೀಡಿಯ ಸಂಪಾದನೆ/ಎಡಿಟ್ ಸಾಧ್ಯ. ಹೆಚ್ಚುತ್ತಿರುವ ಮೊಬೈಲ್ ಬಳಕೆಯ ಮಧ್ಯೆ ವಿಕಿಪೀಡಿಯ ಸಂಪಾದನೆಯ ಅವಕಾಶವನ್ನೂ ನೀಡಿದಲ್ಲಿ ಜ್ಞಾನದ ಹಂಚಿಕೆಯ ಕೆಲಸ ಡೆಸ್ಕ್‌ಟಾಪ್, ಲ್ಯಾಪ್‌ಟಾಪ್‌ಗಳ ಮಿತಿಯಲ್ಲಿರುವುದನ್ನು ತಪ್ಪಿಸಬಹುದು ಎಂಬುದು ವಿಕಿಮೀಡಿಯ ಆಲೋಚನೆಯಾಗಿದೆ.

ಈಗಾಗಲೇ ಲಭ್ಯವಿರುವ ಅನೇಕ ಮೊಬೈಲ್ ಕೀಬೋರ್ಡ್ ಲೇಔಟ್‌ಗಳನ್ನು ಬಳಸಿ ಕನ್ನಡ ವಿಕಿಪೀಡಿಯವನ್ನು ಮೊಬೈಲ್ ಮೂಲಕ ಅಪ್ಲೋಡ್ ಮಾಡಲು ಇನ್ನು ಅಡ್ಡಿ ಇಲ್ಲ. 

ಗೂಗಲ್ ಪ್ಲೇ ಇಂದ ಈ ಅಪ್ಲಿಕೇಷನ್ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ: Wikipedia Beta for Android