ಕಗಪದ ಕನ್ವರ್ಟರ್ ಟೂಲ್ – ಇದು ಅರವಿಂದನ ಸಂಕ – ಇನ್ಸ್ಟಾಲ್ ಮಾಡುವಾಗ ಬರುವ ಒಂದು ಸ್ಕ್ರೀನ್ ನಲ್ಲಿ Thank you Aravinda VK ಎಂದು ಹಾಕುವುದು ಬಿಟ್ಟರೆ, ಮಿಕ್ಕೆಲ್ಲ ಕಡೆ ಅದಕ್ಕೆ ಸಂಬಂಧಿಸಿದ ಮಾಹಿತಿ ಕನ್ವರ್ಟರ್ ಮುಖ ಪುಟದಲ್ಲಿಲ್ಲ. HTML ನ ಜಾವಾಸ್ಕ್ರಿಪ್ಟ್ ನಲ್ಲಿ ಹುದುಗಿರುವ ಜಿಪಿಎಲ್ ಲೈಸೆನ್ಸ್ ಮಾಹಿತಿ ತೆಗೆದಿಲ್ಲ ಎನ್ನುವುದೊಂದೇ ಸಮಾಧಾನ. ಆದರೆ ಬರೀ ಇನ್ಸ್ಟಾಲರ್ ಮಾಡಲು – ಇಡೀ ತಂತ್ರಾಂಶದ ಕಾಪಿರೈಟ್ ಕಗಪದು ಎನ್ನುವುದೇತಕ್ಕೆ? ಜೊತೆಗೆ ಇದು ಕಗಪದ ಕನ್ವರ್ಟರ್ ಎಂದು ಹೇಳುವುದು ಎಂತಹ ದೊಡ್ಡತನ?