Fuel Initiative for KannadaIMG_6787Fuel Initiative for Kannada - Day 2Fuel Initiative for Kannada - Day 2Fuel Initiative for Kannada - Day 2Fuel Initiative for Kannada - Day 2
G N Narasimha Murthy , Kannada Ganaka Parishattu (KAGAPA)Fuel Initiative for Kannada - Spread Sheet UsedFuel Initiative for KannadaIMG_6808Sunil JayaprakashVivek Shankar
Prashant SoratooraShankar PrasadTejasRavi Arehalli, Chetan JeeralaNarayana ShastryFuel Initiative for Kannada - Day 1
Ravi ArehalliJayalakshmi PatilChetan JeeralaMahesh MalnadShankar PrasadG N Narasimha Murthy , Kannada Ganaka Parishattu (KAGAPA)

FUEL Initiative for Kannada, a set on Flickr.

Press Release
ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ
ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ ಕನ್ನಡ ಅನುವಾದದಲ್ಲಿನ ಗೊಂದಲ ಹಾಗು ಏಕರೂಪತೆಯ ಕೊರತೆಯನ್ನು ನೀಗಿಸುವ ಉದ್ಧೇಶದಿಂದ ಸಂಚಯ (sanchaya.net) ತಂಡವು ಈ FUEL ಕನ್ನಡ ಕಾರ್ಯಗಾರವನ್ನು ರೆಡ್‌ ಹ್ಯಾಟ್‌ನ ನೆರವಿನಿಂದ ಹಮ್ಮಿಕೊಂಡಿತ್ತು.
ಭಾಷಾಶಾಸ್ತ್ರಜ್ಞರು, ಅನುವಾದಕರು ಹಾಗು ಬಳಕೆದಾರರು ಮುಂತಾಗಿ ಸುಮಾರು ೧೫ ಜನರು ಪಾಲ್ಗೊಂಡ ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು ೫೭೮ ಪದ/ಪದಗುಚ್ಛಗಳ ಪ್ರಸ್ತುತ ಅನುವಾದವನ್ನು ಅವಲೋಕಿಸಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಒಂದು ಶಿಷ್ಟ ಗಣಕ ಪದಕೋಶವನ್ನು ಸಿದ್ಧಗೊಳಿಸಲಾಯಿತು. ರೆಡ್‌ ಹ್ಯಾಟ್‌ನ ಶಂಕರ ಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ, ಕಂಪ್ಯೂಟರ್ ಪದಕೋಶದಲ್ಲಿ ಶಿಷ್ಟತೆಯ ಅಗತ್ಯಗಳನ್ನು ವಿವರಿಸಿದರು. ನಂತರ ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿಯಾದಂತಹ ಜಿ ಎನ್ ನರಸಿಂಹ ಮೂರ್ತಿಯವರು ಈ ನಿಟ್ಟಿನಲ್ಲಿ ಹಿಂದೆ ನಡೆದ ಕೆಲಸಗಳು ಹಾಗು ಮುಂದಿನ ಕಾರ್ಯಗಳ ಕುರಿತು ಮಾತನಾಡಿದರು. ಇದರಲ್ಲಿ ಖ್ಯಾತ ಕಿರುತೆರೆಯ ನಟಿ ಜಯಲಕ್ಷ್ಮಿ ಪಾಟೀಲ್, ಬನವಾಸಿ ಬಳಗದ ಸದಸ್ಯರು, ಕಣಜದಲ್ಲಿ ಕೆಲಸ ಮಾಡುತ್ತಿರುವವರು, ತಂತ್ರಜ್ಞರು, ಗೂಗಲ್ ಸಂಸ್ಥೆಯಲ್ಲಿನ ಈ ಹಿಂದಿನ ಅನುವಾದಕರು, ಪತ್ರಕರ್ತರು, ಭಾಷಾತಂತ್ರಜ್ಞರು ಮುಂತಾದವರು ಭಾಗವಹಿಸಿದ್ದರು.
ಲೋಕಲೈಸೇಶನ್ ಅಥವ ಪ್ರಾದೇಶೀಕರಣ ಎನ್ನುವುದು ಒಂದು ಉತ್ಪನ್ನವನ್ನು ನಿರ್ದಿಷ್ಟ ಪ್ರದೇಶ ಅಥವ ಭಾಷಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಪರಿವರ್ತಿಸುವ ಮಾಡುವ ಕೆಲಸವಾಗಿದೆ. ಪ್ರಾದೇಶೀಕರಣವು ಹೆಚ್ಚು ಸಂಕೀರ್ಣವಾದಂತೆಲ್ಲಾ ಮತ್ತು ಹಲವು ಉಪಕರಣಗಳನ್ನು ಒಳಗೊಂಡಂತೆಲ್ಲಾ ಅನುವಾದ ಮತ್ತು ಪದಕೋಶದ ಶಿಷ್ಟತೆಯು ಎದುರಾಗುತ್ತಾ ಹೋಗುತ್ತದೆ. ಆದ್ದರಿಂದ, ಈ ಸಂದರ್ಭದಲ್ಲಿ ಆ ರೀತಿಯ ಒಂದು ಕಾರ್ಯಗಾರವು ಅಗತ್ಯ ಹಾಗು ಪ್ರಮುಖವೆನಿಸುತ್ತದೆ. ಇಂದಿನ ತಂತ್ರಜ್ಞಾನ ಕ್ರಾಂತಿಯು ನಮ್ಮ ಕರ್ನಾಟಕದ ಪ್ರತಿ ಮೂಲೆಯನ್ನು ತಲುಪಲು ಅದು ಏಕರೂಪವಾದ ಪದಗಳೊಂದಿಗೆ ಕನ್ನಡದಲ್ಲಿ ಲಭ್ಯವಾಗಿಸುವುದು ಅನಿವಾರ್ಯ.
ಸ್ಥಳೀಯ ಬಳಕೆದಾರರು ತಂತ್ರಜ್ಞಾನವನ್ನು ಸುಲಭವಾಗಿ ಬಳಸಲು ನೆರವಾಗಲು FUEL ಪರಿಯೋಜನೆಯು ಒಂದು ಶಿಷ್ಟವಾದ ಹಾಗು ಏಕರೂಪವಾದ ಪಾರಿಭಾಷಿಕ ಪದಕೋಶವನ್ನು ಒದಗಿಸುತ್ತದೆ. ಈಗಾಗಲೆ ಸುಮಾರು ೯ ಭಾರತೀಯ ಭಾಷೆಗಾಗಿ ಈ ಬಗೆಯ ಕಾರ್ಯವು ನಡೆದಿದ್ದು, ಕನ್ನಡದ ಕಂಪ್ಯೂಟರ್ ಪದಕೋಶವು ೧೦ನೆಯದ್ದಾಗಿದೆ.

Via Flickr:
Workshop on the standardization of Kannada Computing Terminology – at Center for Internet & Society, Bangalore

28th and 29th January 2012

More Info can be found at :

ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ | ಸಂಚಯ