ಏಕಾಗ್ರತೆಯ ಕೊರತೆ,
ತಂತ್ರಜ್ಞಾನದೆಡೆ ಸ್ವಲ್ಪ ಹೆಚ್ಚೇ ಒಲವು,
ಸ್ವಲ್ಪ ಓವರ್ ಕಾನ್ಫಿಡೆನ್ಸು
ನಡುವೆ ಜಾರಿತ್ತು ಟೈಪೋ…
ಇಂಗ್ಲೀಷಿನಲ್ಲಿ ಕಂಗ್ಲೀಷು
ಜೊತೆಗೆ ಮುಂದೆ ಬರುವುದನು
ಕಷ್ಟ ಪಡದೇ ಟೈಪಿಸುವ,
ಪ್ರಿಡಿಕ್ಷನ್ನು ಮತ್ತೊಂದು…
ಅಚ್ಚು ಒತ್ತಿದ್ದೊಂದು,
ಕೊನೆಗೆ ದಕ್ಕಿದ್ದಿನ್ನೊಂದು
ಮೀರಿತ್ತು ಕಾಲ, ಅದನು
ಸರಿಪಡಿಸುವುದರ ಮೊದಲೇ..
“ಟೈಪೋ….”
ಇದು ಮುಜುಗರದ ಸರಕು
ಅಲ್ಲೆ ಎಲ್ಲೋ ಅಡಗಿತ್ತು ಸ್ಟಾಕು
ತಪ್ಪು ತಪ್ಪೇ… ತಿದ್ದಲಿಕೆ ಸಾಧ್ಯವಿಲ್ಲ..
ಇದು ನಾನು ಮಾಡಿದ್ದಲ್ಲ
ಟೆಕ್ನಾಲಜಿಯ ಮಿಸ್ಟೇಕು….
ವಹಿಸುವೆ ಜಾಗ್ರತೆಯ
ಮರೆಯದೆ ಇನ್ಮುಂದೆ…
“ಕ್ಷಮಿಸಿ ಬಿಡಿ ಒಮ್ಮೆ!”