ಸಂಜೆಯ ಆ ತಂಗಾಳಿ
ನನ್ನ ಕೆನ್ನೆ ಸವರಿತ್ತು
ಒಳಗಿನ ಏರ್ ಕಂಡಿಷನ್ 
ನನ್ನ ಹೊಸಕಿ ಹಾಕಿದಾಗ

ಕಾರಿನ ಕಿಟಕಿಯ ಹೊರಗೆ 
ಮುಖವಿಟ್ಟಾಗ ರಾಚಿದ
ತಂಗಾಳಿಯ ತಂಪಿಗೆ
ನನ್ನ ಕೆನ್ನೆಯೂ ಕೆಂಪೇರಿತ್ತು

ವೇಗದ ಮಿತಿಯ ಒಳಗೇ

ಮಿತಿ ಮೀರಿದ ಕನಸುಗಳ
ಇತಿಮಿತಿಯಿಲ್ಲದ ಆಟದಲ್ಲಿ
ತಂಗಾಳಿ ನನ್ನ ಎಚ್ಚರಿಸಿತ್ತು

— ನನ್ನ ಎಚ್ಚರಿಸಿತ್ತು