ದಿ‍ನಕ್ಕೆ ಇಪ್ಪತ್ತನಾಲ್ಕೇ‍ ತಾಸು‍
ತುಸು ಹೊತ್ತು ನಿದ್ದೆ,
‍ಕಾಫಿ ‍(ಟೀ), ಬೂಸ್ಟು, ಹಾರ್ಲಿಕ್ಸು
‍ಇಲ್ಲವಾದಲ್ಲಿ‍ ಬಾದಾಮಿ ಹಾಲು
‍ದಿನದೂಗಿಸುವ ತಳಮಳದ ಮಧ್ಯೆ
‍ಕೆಲಸ – ಪ್ರಶ್ನೆಗಳು‍
‍ಓ‍ಮಿಷ: ಅಪ್ಪಾ, ಕೆಲಸಕ್ಕೋದ್ರೆ ಕಾಸು ಕೊಡತಾರಲ್ಲಾ?
ಅದರಿಂದ ಮ‍ಮ್ಮಮ್ ತಗೋ ಬಹುದು, ಆಟದ ಸಾಮಾನ್ ತಗೋ‍ಬೋದು
‍ಸುತ್ತಾಡ್ಬೋದು… ನಾನು ಸ್ಕೂಲಿಗೆ ಹೋಗ್ತೀನಿ.. ಅವರಿಗೂ ಕಾಸ್ ಕೊಡ್ಬೇಕು ಅಲ್ವಾ ಅಪ್ಪಾ?
…‍‍
ಹಗಲು‍ ಸಂಜೆ ಎನ್ನದೇ ದೀನ ದೃಷ್ಟಿಯ ಜೊತೆಗೆ
‍ಸಹಾಯ ಕೇಳುವ ಆ ಕೈಗಳು… ಕೆಲವೊ‍ಮ್ಮೆ ಒಂದೇ ಒಂದು
‍ಓ‍ಮಿಷ: ಅಪ್ಪಾ, ಅಜ್ಜಿ ಪಾಪ… ಮಮ್ಮಮ್ ಬೇಕಂತೆ ಕಾಸು ಕೊಡೋಣ್ವಾ?
‍ತಾತ, ಪಾಪ ಏನಾದ್ರೂ ಕೊಡಲಾ?
‍…
ಆ ದಯೆ – ಮುಗ್ದತೆಯ ಆಲೋಚನೆಯ ಸುತ್ತ ತಿರುಗಿ
ಈ‍ ಕಾರ್ಪೋರೇಟ್ ಜಗತ್ತಿನ ಸಿಮೆಂಟು ಗೋಡೆಗಳ ಮಧ್ಯೆ
‍ಎಲ್ಲವನ್ನೂ ಕೇಳಿಸಿಕೊಳ್ಳುವ ಅದೃಶ್ಯ ಕಿವಿಯಾಯಿತಲ್ಲ…
‍ಕೆಲಸಕ್ಕೆ ಮಾತ್ರ ಬಿಡುವು, ಸಮಯ‍, ಕಡೆಗೆ ಮಾ.. ಮಾ.. ಯಾವುದೂ ಇಲ್ಲ..