ನವಿಲೆ ನವಿಲೆ ನೀನೆಲ್ಲಿರುವೆ
ಕಾಣಲು ನಿನ್ನ
ಹಾತೊರೆದಿರುವೆ

ಜಳ ಜಳ ಸುರಿಯುತ
ಜಿನುಗುವ ಮಳೆಯಲಿ
ಕುಣಿಯುತ ಬರುವೆ
ಸುಂದರ ಚಲುವೆ

ಮಳೆಯಲಿ ನಲಿವುದ
ಕುಣಿಯುವ ನೀನು
ಕುಣಿವುದ ಕಲಿಸಿದೆ
ಕಾಣೆನೆ ನಾನು!

ಸಾವಿರ ಕಣ್ಣಿನ ರೆಕ್ಕೆಯ ಬಿಚ್ಚಿ
ಎಲ್ಲರ ಮನದಿ
ಚಿಟ್ಟೆಯ ಬಿಟ್ಟೆ

ಸಿಗಲೇ ಇಲ್ಲ ವಾರಗಳಾಯ್ತು
ಹೊಗಿದ್ದೆಲ್ಲಿ ಹೇಳದೆ ನೀನು?
ಕಾಣದೆ ನಿನ್ನ
ಇರಲಾರೆನು ನಾನು….

ನವಿಲೆ ನವಿಲೆ  ನೀನೆಲ್ಲಿರುವೆ
ಕಾಡಿಸ ದೆ ನೀ ಬರುವೆಯ ಚಲುವೆ
ನಿನಗಾಗಿಯೆ ನಾ ಕಾದಿರುವೆ…

ಜಗಕೆ ಜೀವವ ತುಂಬುತ ನೀನು
ಸುಂದರಗೊಳಿಸಿದೆ ಈ ಬನವನ್ನು
ಜೊತೆಯಲಿ ನಿನ್ನ ಕೂಡುತ ನಾನು
ಕಳೆಯಲೆ ದಿನವ ನಿನ್ನೆದುರಲ್ಲೆ

ಚಿತ್ರ: ಪವಿತ್ರ ಹೆಚ್