ಬೆಳದಿಂಗಳ ರಾತ್ರಿ ಬರುವ ಚಂದಿರನ

ಕ್ಯಾಮೆರಾದಲ್ಲಿ ಸೆರೆಹಿಡಿಯುವ ಬಯಕೆ
ಇಂದೇಕೋ ಅದು ಹೆಚ್ಚಾಗಿ ತಲೆ ಮೇಲೆತ್ತಿದೆ
ಮರದ ಮಧ್ಯದಲ್ಲಿ ಕಂಡ ಆ ಬೆಳ್ಳಗಿನ ವಸ್ತು
ನನ್ನೇ ಕದ್ದು ನೋಡುತ್ತಿರುವ ಶಶಿಯಂತಿತ್ತು
ಓ! ಇಲ್ಲೇ ಇದ್ದೀಯ ಎಂದು ಸೆರೆ ಹಿಡಿದೆ
ಬೀದಿ ದೀಪದ ಮೋರೆಗೆ ಮಾರಿ ಹೋದ ನಾನು
ಅದನ್ನೇ ಸೆರೆ ಹಿಡಿದು ಮೋಸ ಹೋದೆ…

ಇದೇ ಅನಾಲಜಿಯನ್ನ ನನ್ನ ಕತೆಗೆ ಹೋಲಿಸಲೇ?
ನನ್ನ ಕನಸಲಿ ಬರುವ ಆ ಸುಂದರ ಮುಖ
ಹೀಗೆ ಚಂದ್ರನಂತೆ ಅಲ್ಲೆಲೋ ಸುತ್ತಿ ಸುಳಿದು
ನನ್ನ ಮನವ ಕಾಡಿ ಮತ್ತೆಲ್ಲೋ ಕಂಡಂತೆ
ಇನ್ಯಾರೋ ಮುಖದ ಗ್ಲಿಂಪ್ಸ್ ನ  ಸ್ಯಾಂಪಲ್ ತೋರಿಸಿ
ಓಡಿ ಹೋಗಿರಬಹುದಲ್ಲ… ನನ್ನ ಮೋಸ ಮಾಡಿರಬಹುದಲ್ಲ…

ನಾನು ಮೋಸ ಹೋಗಿದ್ದಾದರೂ ಯಾಕೆ?

(ವಿ.ಸೂ : ನನ್ನ ತಚೆ ಅಭಿಮಾನಿ ದೇವರುಗಳಿಗೆ ಮತ್ತು ತಮಾಷೆಗಾಗಿ ಮಾತ್ರ … 🙂 )