ಮೊದಲ ಹಂತ:
ಸಂಚಯದ ಪುಸ್ತಕ ಸಂಚಯ (‌http://pustaka.sanchaya.net) ಯೋಜನೆಯ ಮೂಲಕ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನು ಸುಲಭವಾಗಿ ಕನ್ನಡದಲ್ಲಿ ಹುಡುಕಲು ಸಾಧ್ಯವಾಗುವಂತೆ ನಮ್ಮ ತಂಡ ಕೆಲಸ ಮಾಡಿದ್ದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಸಾಹಿತ್ಯದ ಜೊತೆಗೆ, ಕಲೆ, ವಿಜ್ಞಾನ, ತಂತ್ರಜ್ಞಾನ ಇತರೆ ೧೦೦ಕ್ಕೂ ಹೆಚ್ಚು ವರ್ಗಗಳಿಗೆ ಸೇರಿದ ಪುಸ್ತಕಗಳಿವೆ. ಪುಸ್ತಕ ಸಂಚಯದಲ್ಲಿ ವರ್ಗಗಳ ಪಟ್ಟಿಯನ್ನೂ, ಅವುಗಳನ್ನು ಬಳಸಿ ಪುಸ್ತಕ ಹುಡುಕುವ ಸೌಲಭ್ಯವನ್ನೂ ನೀಡಲಾಗಿದೆ. 

ಈ ಪುಸ್ತಕಗಳಲ್ಲಿ ಅತ್ಯುತ್ತಮವಾದ ಪುಸ್ತಕಗಳ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಲು ಕೆಲಸ ಮಾಡುತ್ತಿದ್ದೇವೆ. ಈ ಪುಸ್ತಕಗಳಲ್ಲಿ ಯಾವುವು ವಿಕಿಯಲ್ಲಿ ಪುಸ್ತಕ ಪುಟ ಹೊಂದಬಹುದು ಎಂಬುದನ್ನು ನೀವುಗಳು ನಮಗೆ ತಿಳಿಸಲು ಸಾಧ್ಯವಿದೆ. ಇದು ನಮ್ಮ ಯೋಜನೆಯನ್ನು ಮತ್ತೊಂದು ಹಂತಕ್ಕೆ ಒಯ್ಯಲು ಸಹಾಯ ಮಾಡುತ್ತದೆ. ಪುಸ್ತಕದ ಹೆಸರುಗಳನ್ನು ‌pustaka.sancaya.netನಲ್ಲಿ ಹುಡುಕಿ, ಆಯಾ ಲೈಬ್ರರಿಯ ಪುಸ್ತಕಗಳನ್ನು ಹುಡುಕಿ ಓದುವ ಅವಕಾಶ ಕೂಡ ಇದರಿಂದ ನಿಮಗೆ ಲಭ್ಯವಾಗಲಿದೆ. 

ಈ ತಿಂಗಳ ೨೨ರ ಒಳಗೆ ಈ ಕೆಲಸವನ್ನು ಮುಗಿಸುವ ಆಲೋಚನೆ ಇದ್ದು, ನಿಮ್ಮ ಕೈಲಾದಷ್ತು ಸಹಾಯ ಮಾಡುವಿರೆಂದು ನಂಬಿದ್ದೇವೆ. ನಮ್ಮ ಜೊತೆಗೆ ಸೇರಿ ಕೆಲಸ ಮಾಡಲು ಈ ಪೋಸ್ಟಿಗೆ ಒಂದು ಕಾಮೆಂಟ್ ಹಾಕಿ.