ನೆನ್ನೆ ಗುಡುಗು ಮಿಂಚಿನ ನಡುವೆ
ಕಂಡರಿಯದ ಆ ಆಕಾಶಕಾಯ,
ತನ್ನ ತಾನೇ ಸುತ್ತುತ್ತಾ
ತನ್ನ ದೀಪಗಳ ಪ್ರಭೆಯಿಂದ
ನೀಲಿ ಬೆಳಕ ಸೂಸುತ್ತ
ಯಾರನ್ನೋ ಹುಡುಕುತ್ತಾ
ಹಾದು ತೇಲಿ ಹೋಗುತ್ತಲಿತ್ತು…

ಪೂಚಂತೇ ಹೇಳಿದ ಫ್ಲೈಯಿಂಗ್ ಸಾಸರ್ ಕಥೆ
ನೆನಪಿಗೆ ಬಂದು…
ಓ ಇದು ಅದೇ ಇರಬೇಕಲ್ಲ
ಪರಲೋಕದ ಗೂಡಾಚಾರಿಗಳು
ಏಲಿಯನ್ ಗಳೂ ಇರಬಹುದಲ್ಲ
ಅಥವಾ ಅಮೇರಿಕಾ ರಷ್ಯಾ ಇತರೆ
ದೇಶಗಳ ಗೂಢಾಚಾರಿಗಳು..
ಏನೆಲ್ಲಾ ತಲೆಯಲ್ಲಿ ಹೊಳೆದು
ಮಿಂಚಿನಂತೆ ಮಾಯವಾಗಿ ಹೋದವು