ನನಗೂ ಬೇಕು ರಜೆ
ವಾರಕ್ಕೆ ಎರಡು ದಿನ!
ಹೌದು ಮಿಕ್ಕೆಲ್ಲರಂತೆ
ನನಗೂ ಬೇಕು ರಜೆ
ಪ್ರತಿದಿನವೂ ಯಂತ್ರದಂತೆ ದುಡಿದು
ಹೊಸತು ಯೋಚನೆಗಳೇ ಬಾರದಾಗಿವೆ
ಬಂದರೂ, ಕಾರ್ಯಗಳ ಸಾಧಿಸದಂತಾಗಿವೆ
ಈಗ ನನಗೆ ಬೇಕು ರಜೆ..
ನಾಲ್ಕು ಗೋಡೆಗಳ ಕೆಡವಿ
ದಿನವೂ ರಜೆಯೇ ಬೇಕು….
ಎಂಬ ಬೇಡಿಕೆ ಎನದಲ್ಲ
ಸಾಕು, ವಾರಕ್ಕೆ ಎರಡೇ ದಿನ!
ಇದು ನನ್ನ ಸಣ್ಣ ಬೇಡಿಕೆ
ಇದಕ್ಕೆ ಸ್ಟ್ರೈಕ್ ಮಾಡಬೇಕೇ?
ಮಾತುಗಳು ಸಾಲದೇ?
ಲೇಖನಿಯೂ ಸಧ್ಯ ಸುಸ್ತಾಗಿದೆ
ಈಗ ನನಗೂ ಬೇಕು ರಜೆ 😉