ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍
ನ‍ಗರವಿಡೀ ಹರಡಿಹವು‍
ಮತಭೇದವಿಲ್ಲ ಜೋಕೆ,ಎಚ್ಚರ-ತಪ್ಪಿದಿರೋ ‍
ಬಿದ್ದೀರಿ – ಆ ಕಪ್ಪು ರಂಧ್ರಗಳಲ್ಲಿ
ದಸರೆಯ ಆನೆಗಳು ಅಲುಗಿದರೂ
‍ಸಹಿಸಬಹುದೇನೋ
‍ಇಲ್ಲಿ ದಿನವೂ ಮೈ ಜುಮ್ಮೆನಿಸುವ
‍‌ಸ್ವರ್ಗ ಅಲ್ಲಲ್ಲ‍… ನರಕದ ಸವಾರಿ

ಆ ಧರ್ಮರಾಯ‍ನ ಸವಾರಿಯಾದರೂ
‍ಸೇರೀತು ದಡವ – (ಸ್ವರ್ಗಕ್ಕೋ – ನರಕಕ್ಕೋ)
ತೆರಿಗೆ ಪಾವ‍‌ತಿಸಿದರೂ‍ ಬಡವನಿಗೆಲ್ಲಿದೆ‍ ‍
ರ‍ಹದಾರಿಯ ತೆರವು

ನಮ್ಮ ನಮ್ಮಲ್ಲಿಯೇ ಕೋಪ ತಾಪದ
‍‌ನೆವವು – ಬೈದು‍, ಬೈಸಿಕೊಂಡು
ಮೂರನೇ ಕಣ್ಣು ತೆಗೆದು‍ ‍‍ಶಾಪ
ಹಾಕಿ ನೆಡೆವುದಷ್ಟೇ….
ಮಳೆರಾಯನೂ ನಗುವನು ಪ್ರತಿವರ್ಷ‍
‍ಕಪ್ಪು – ಬಿಳುಪು – ಬೂದು ‍
ಮತ್ತೆ ಕಂಡಿದ್ದು, ಮಿಂದದ್ದು
‍ಉಳಿದದ್ದೂ ಮ‍ಣ್ಣು…
ಹೇಳ ಬೇಕಷ್ಟೇ….
‍ನಮ್ಮೂರ ರಸ್ತೆಗಳು
‍ಚಂದ್ರ – ಮಂಗಳ ಮುಂದೆ ಬೇರೆ ಲೋಕಕ್ಕೂ
‍ಪಯಣದ ಪ್ರಾರಂಭ ಇಲ್ಲಿಂದಲೇ…