ಚಿತ್ರ:- ಪವಿತ್ರ ಹೆಚ್

ಮಿನುಗು ನಕ್ಷತ್ರಗಳಿವೆಯಲ್ಲಿ
ಶಶಿಯು ಅವುಗಳ ಮಧ್ಯೆ
ಅಲ್ಲೆಲ್ಲೋ ಉದುರಿದಂತೆ ಧೂಮಕೇತು
ಮನದಲ್ಲಿ ಮಿನುಗಿತು ಸಣ್ಣ ಆಸೆ!

ಬೆಳಗ್ಗೆ ಸೂರ್ಯ ಕಣ್ಬಿಡುವಾಗ
ಬೆಳ್ಳಿ ಕಿರಣಗಳ ಪ್ರಭಾವಳಿಯನ್ನು
ಕೆರೆಯ ಅಂಗಳದಲಿ ಚೆಲ್ಲಿದಾಗಲೇ
ಆ ಒಂದು ಆಸೆ ಮಿಂಚಿತ್ತು!

ಮಧ್ಯಾನ್ಹದ ಬಿಡುವಿನ ಸಮಯದಲ್ಲಿ
ದಿನಾ ನನ್ನಿದುರಾಗುತ್ತಿದ್ದ
ಆ ತೂಕಡಿಕೆಯ ಮಡಿಲಲ್ಲಿ
ಆ ಆಸೆ ಮೆತ್ತನೆ ಸುಳಿದಿತ್ತು!

ಮುಂಜಾನೆ ನಗುತ್ತಾ,
ಮಧ್ಯಾನ್ಹ ತೂಕಡಿಸಿ,
ಸಂಜೆ ಚಂದಾಮಾಮನ ನೋಡಿ
ನಗುವ ಆ ಮಗು ನಾನಾಗ ಬಾರದೇಕೆ?

%d bloggers like this: