ಉದ್ಯಾನದೊಳಗೊಂದು ಸುಂದರ ದಿನ
ಅಣ್ಣ ಹೇಳುತ್ತಿರುವನೊಂದು ಕಥೆಯ
ರೆಡಿ ಇಲ್ಲ ಕೇಳಲಿಕ್ಕೆ ತಂಗ್ಯವ್ವಾ, ಹೇಳ್ತಾಳೆ…
ಬಿಡಲೇ ಬಿಡ್ತೀಯಾ ಬರೆ ಬುರುಡೆಯಾ….

ಅಣ್ಣಾ ಹೇಳ್ತಾನೆ:
ನಿಜ ಹೇಳ್ತೀನಿ ಕೇಳವ್ವಾ ನೀನು
ಬುರುಡೆ ಬಿಡ್ಲಿಕ್ಕೆ ಬರಾಂಗಿಲ್ಲ ನನ್ಗೆ
ಕೇಳಿದೀನಿ ಇಲ್ಲಿನ ಕಥೆಯಾ ಶ್ಯಾಲ್ಯಾಗೆ
ವಸಿ ಓಡಿ ಹೋಗ್ದೆ ಕೇಳಿದ್ರಾಯ್ತು ನೀನು…

ತಂಗಿ:

ಅಯ್ಯೋ ಬಿಡ್ಲೇ ಮುಗ್ಯಾಂಗಿಲ್ಲ ನಿಂದು
ಆಟ ಆಡ್ಲಿಕ್ಕೊತ್ತಾಯ್ತು.. ಕಾಯ್ತಾವ್ರ್ ನನ್ ಗೆಳತೀರು..
ಕಥೆ ಹೇಳಾಗಿಂದ್ರೆ ಕೇಳು, ರಾತ್ರಿ ಹೇಳೋವಂತೆ ನೀನು
ಬರಿಸ್ತೀಯಾ ನಿದ್ದೆ ನನ್ಗೆ, ತಲೆ ನೋವಾಂಗಿಲ್ಲ ಕೇಳು..
ಅಣ್ಣ:

ಬಿಡಾಂಗಿಲ್ಲ ನಿನ್ನ ಇವತ್ತು, ಕೂಡಿ ನನ್ನೊಡನಾಡು
ಬಾಳ ಮಾತಾಡ್ತೀ ನೀನು, ಸ್ವಲ್ಪ ನನ್ದೊಸಿ ಕೇಳು
ನಾ ನಿಂಜೋಡಿ ಆಡ್ಬೇಕಾದ್ರೆ ಬೇರೆವ್ರ್ಯಾಕೆ ಹೇಳು..
ಚಿನ್ನ ಅಲ್ವಾ, ಕೇಳು ಮಾತ್ನಾ ನನ್ಕೂಡಾ ನೀನು ಆಡು
ಚಿತ್ರಗಳು: ಹಳ್ಳಿ ಮನೆ ಅರವಿಂದ
%d bloggers like this: