ನಿದ್ದೆ
ನಿದ್ದೆ ಬರಲಿ ನಿನಗೆ
ದಿನದ ದಣಿವ ಸರಿಸೆ
ಮಲಗು ಚಿನ್ನ ನೀ
ಹೊದ್ದು ಕನಸ ಹೊದಿಕೆ
ಬೆಳಗು
ಸೂರ್ಯ ತಟ್ಟುವ ಕದವ
ಬರುವ ಮುಂಜಾನೆ
ಚುಕ್ಕಿ ಚಂದ್ರಮ ಸರಿದು
ಬೆಳ್ಳಿ ರೆಕ್ಕೆಯ ತೆರೆದು
ಕಣ್ರೆಪ್ಪೆ
ಹಕ್ಕಿಪಕ್ಕಿಗಳ ಜೊತೆಗೆ
ಸುಪ್ರಭಾತದ ಕರೆಗೆ
ಕಣ್ಣರೆಪ್ಪೆಯ ಸರಿಸಿ
ಜಗವ ಕಾಣೋ ಮಗುವೆ