ವರುಷ ವರುಷಕೂ ಬರುವ ಯುಗಾದಿ
ನನಗೊಂದಿಷ್ಟು ಹೊಸ ಕನಸುಗಳ
ನೆಯ್ದು ಕೊಡು ಯುಗಾದಿ
ಹೊಸ ದಿರಿಸ ತೊಟ್ಟ ಆ ಮಗುವಿನ
ನಗು ಎಲ್ಲರನ್ನೂ ನಗಿಸುವಂತೆ
ನಗುವಿನ ಬುತ್ತಿ ಕಟ್ಟಿ ಕೊಡು ನನಗೆ
ಪ್ರತಿವರ್ಷ ನೀನು ಬರುವಾಗ
ಹೊತ್ತು ತರುವ ಆ ಸಂತೋಷ
ವರ್ಷವಿಡೀ ಇರಲಿ ಹಾಗೆ
ಸಂತೆಯಲಿ ತುಂಬಿ ತುಳುಕುವ
ಆ ಹೂವ ಪರಿಮಳ ವರುಷ ಪೂರಾ
ಕಂಪ ತರಲಿ ನಮ್ಮೆಲ್ಲರ ಬಾಳಲ್ಲಿ
ಹೊಂಗಿರಣದ ಆ ನೇಸರನಿಗೂ
ಒಬ್ಬಟು ಬಡಿಸಿಕೊಡುವ
ಹೊಸ ಬೆಳಕ ತೋರು ನೀನಿಲ್ಲಿ
ಬೇವು ಬೆಲ್ಲದ ಜೊತೆಗೆ
ಬಾಳ ಸವಿ ಮಿಶ್ರಣವ
ತೂಗಿ ತೋರೆಲೆ ನೀನು
ಯುಗಾದಿ..
– ಎಲ್ಲರಿಗೂ ವಿಕೃತಿ ನಾಮ ಸಂವತ್ಸರದ ಶುಭಾಶಯಗಳು