ಎದ್ದಿದ್ದು ತಡವಾಯ್ತು
ಹೋ! ರವಿವಾರ ಇವತ್ತು
ಇನ್ನೊಂದು ಸ್ವಲ್ಪ ಹೊತ್ತು
ನಿದ್ದೆ ಮಾಡಿದರಾಯ್ತು

ಮೊದಲೆಲ್ಲ ಬರ್ತಿತ್ತು ಟೀವಿಲಿ
ಟಾಮ್ ಅಂಡ್ ಜರ್ರಿ ಆಟ
ನೋಡ್ತಾನೆ ಮಲಗಿರ್ತಿದ್ದೆ
ಜಗ್ಗಾಡ್ದೆ, ಇರ್ತಿರ್ಲಿಲ್ಲ ಕೆಲ್ಸ

ಚಾರ್ಲಿ ಚಾಪ್ಲಿನ್ ಜೊತೆ
ಹಳೆ ಕನ್ನಡ ಚಿತ್ರಗೀತೆಗಳು
ಅದಾದ್ಮೇಲೆ ಮಹಾಭಾರತ
ಕೊನೆ ಕೊನೆಗೆ ಶಕ್ತಿಮಾನ್

ಮುಗ್ದೇ ಹೋಗ್ತಿತ್ತು ಮಧ್ಯಾಹ್ನ
ನಂತ್ರ ಒಂದು ಬಹುಭಾಷಾ ಚಲನಚಿತ್ರ
ಸಂಜೆ ಆದ್ರೆ ಒಂದು ಕನ್ನಡ ಸಿನಿಮಾ
ರಾತ್ರಿ ಆಯ್ತು ಅಂದ್ರೆ ಭಯ ಶುರು

ಹೋಮ್ ವರ್ಕ್ ಮಾಡಿಲ್ಲಾ ಗುರು………

%d bloggers like this: