ಚಿತ್ರ: ಪವಿತ್ರ. ಹೆಚ್

ರಾಮದೇವರ ಬೆಟ್ಟದ ಮಡಿಲಲ್ಲಿ
ಕುಳಿತ ಮೂರ್ವರ ಮನವು
ರಾಮನ ನೆನೆಯುತ್ತಿತ್ತೋ?

ರಾಮದೇವರ ಬೆಟ್ಟದ ಮಡಿಲಲ್ಲಿ
ಕುಳಿತ ಮೂರ್ವರ ಹೃದಯ
ಏತಕ್ಕೆ ಹಪಹಪಿಸುತ್ತಿತ್ತೋ?

ರಾಮದೇವರ ಬೆಟ್ಟದ ಮಡಿಲಲ್ಲಿ
ಕುಳಿತ ಮೂರ್ವರ ದನಿಯಲ್ಲಿ
ರಾಮಾಯಣ ಮಾರ್ಧನಿಸುತ್ತಿತ್ತೋ?

ರಾಮದೇವರ ಬೆಟ್ಟದ ಮಡಿಲಲ್ಲಿ
ಕುಳಿತ ಮೂರ್ವರ ಜಪದ
ಕೊನೆಗೆ ಆದದ್ದೆಂತೋ?

ರಾಮದೇವರ ಬೆಟ್ಟದ ಮಡಿಲಲ್ಲಿ
ಕುಳಿತ ಮೂರ್ವರ ಮುಂದೆ
ಇದ್ದಂತಹ ಪ್ರಕೃತಿ ಇದ್ದದ್ದೆಂತೋ?

ರಾಮದೇವರ ಬೆಟ್ಟದ ಮಡಿಲಲ್ಲಿ
ಕುಳಿತ ಮೂರ್ವರ ಸೆರೆಯ
ಹಿಡಿದರವರು ಕ್ಲಿಕ್ಕಿಸಿದೆಂತೋ?