Recycled rejoice with ‘New Life’
Uploaded by omshivaprakash

ಹಳೆಯ ವಸ್ತುಗಳು ಅಟ್ಟ ಬಿಟ್ಟು ಇಳಿಯೋದೆ ಕಷ್ಟ ಬಿಡಿ. ಇನ್ನುಈ ರೀಸೈಕಲ್ ವಿಷಯ ಎತ್ತಿದ್ರೆ ಹತ್ತಾರು ಹಳೆಯ ವಿಷಯಗಳ ಬುತ್ತಿ ಬಿಚ್ಚಿಟ್ಟು, ಅಜ್ಜಿ ತಾತ ಮಾಡ್ತಿದ್ದ ರೀಸೈಕ್ಲಿಂ ಗ್ ನ ಪ್ರಚಾರವೇ ಆಗಿಹೋಗುತ್ತೆ .

ಇನ್ನು ಹೊಸ ಸುದ್ದಿ ಕೇಳೋಣ. ನಮ್ಮ ಸುತ್ತಮುತ್ತ ಈಗ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ರೀಸೈಕ್ಲಿಂಗ್ ನದ್ದೇ ಪಾಠ. ಇದ್ದಕ್ಕಿದ್ದಂತೆ ಎಲ್ಲರೂ ಪರಿಸರ ಸಂರಕ್ಷ ಣೆ ಅಂತ ಮಾತಾಡ್ತಾ, ರೀಸೈಕಲ್ ಮಾಡಿ ಅಂತಿದಾರೆ ಅಲ್ವೇ? ಒಂದೆಡೆ ಬೆಂಗಳೂರು ರೀಸೈಕಲ್ ಹಬ್ಬ ಜೊತೆಗೆ , ಚಿತ್ರಕಲಾ ಪರಿಷತ್ , ನಂ೧ ಶಾಂತಿ ನಗರ್ ಸ್ಟುಡಿಯೋ, ಜಾಗ ಇತ್ತ ಮುಖಮಾಡಿ ನಿಂತರೆ ಕಸವನ್ನು ರಸ ಮಾಡಿ, ಮತ್ತದನ್ನು ನಿಮ್ಮ ಮನೆಯ ಮೂಲೆಯ ಜಾಗವನ್ನು ಅಲಂಕರಿಸಲು ತಮ್ಮ ಕೈಚಳಕ ತೋರಿಸುವ ಕಲೆಗಾರರು. ಪರಿಸರದ ಸ್ವಲ್ಪಕಸವನ್ನು ಖಾಲಿಮಾಡಿದ ಹಾಗೂ ಆಯ್ತು , ಜೊತೆಗೆ ಒಂದು ಬದುಕೂ ಆಯ್ತು. – ಈ ಹೊಸತು‌ ಮತ್ತು ಹಳತರ ನಡುವೆ ಇರುವ ವ್ಯತ್ಯಾಸಗಳೇನು? ಉತ್ತ ರ ನೀವೇ ಹುಡುಕೊಳ್ತೀರ ಅಲ್ವೇ?