೧೧ ಮತ್ತು ೧೨ನೇ ಶತಮಾನದ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ರೂಪ ‘ವಚನ ಸಾಹಿತ್ಯದ’ ಎಲ್ಲ ವಚನಗಳನ್ನು ಆಸಕ್ತರು, ವಿದ್ಯಾರ್ಥಿಗಳು, ಸಾಹಿತಿಗಳು, ಭಾಷಾತಜ್ಞರು, ಸಂಶೋಧಕರು, ತಂತ್ರಜ್ಞರು ಬಳಸಲು ನೆರವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿರುವ “ವಚನ ಸಂಚಯ” ತಾಣ ಈಗ ನಿಮ್ಮ ಮುಂದಿದೆ. ಇದನ್ನು ಬಳಸಿ, ಇತರರೊಡನೆ ಹಂಚಿಕೊಳ್ಳಿ. ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ, ಸಲಹೆ ಸೂಚನೆಗಳಿಗೆ ನಾವು ಕಾತುರದಿಂದ ಕಾಯುತ್ತಿದ್ದೇವೆ. ಇದು ಪರೀಕ್ಷಾರ್ಥ (beta) ಆವೃತ್ತಿಯಾಗಿದ್ದು, ಇದರಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು.

 
ಪ್ರಜಾವಾಣಿಯಲ್ಲಿ ನಮ್ಮ ಈ ಯೋಜನೆ ಮತ್ತು ತಂಡದ ಪರಿಚಯ ಇಲ್ಲಿ ಪ್ರಕಟವಾಗಿದೆ.