ಬಂಡೀಪುರದ ಗೊಂಡಾರಣ್ಯದಲಿ 
ರವಿಯ ರಂಗಿನಾಟ!
ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದು
ಚಿತ್ರವಿಚಿತ್ರ ಲೋಕ!

ಚರಾಚರ ಪಕ್ಷಿ ಸಂಕುಲಗಳ ಜೊತೆ
ವನ್ಯ ಮೃಗಗಳ ವಾಸ
ಜುಳು ಜುಳು ಹರಿವ ನೀರಿನ ಸೆಲೆ
ಅದರೊಡನಾಡು ನೀ ಬೆಳಕಿನಾಟ!

ನಿರ್ಮಲವಾಗಿರುವ ನೀರಲ್ಲೆಸಯಲಿಲ್ಲ ತಾನೆ
ನೀ ಕಲ್ಲು ಚಪ್ಪಡಿಯನ್ನು.
ಖುಷಿಯ ಕೊಟ್ಟರೂ ಹೆದರಿಸುವುದದು
ಬೆಚ್ಚನೆ ಮಲಗಿರುವ ಮೊಸಳೆಯನ್ನು!

ಜೋಕೆ! ವನ್ಯಸಿರಿ ನಿನ್ನ ಕ್ಯಾಮೆರಾದಲ್ಲಿ
ಸೆರೆಯಿಡಿಯಲಿಕ್ಕೆ ಮಾತ್ರ..
ಕಡಿದು ತಂದೆಯೋ ವನವ ಮಾನವ
ಕಾದಿದೆ ನಿನಗೆ ಶಾಪ!

ಚಿತ್ರ: ಅನಿಲ್ ರಮೇಶ್

%d bloggers like this: