ಜೀವತಳೆದು ಮೊಗ್ಗಾಗಿ,
ಹೂವಾಗಿ, ಕಾಯಾಗಿ
ಹಣ್ಣಾಗಿ, ಇತರರಿಗೆ
ಸವಿಯ ಜೇನಾಗಿ ಬೆಳೆದಿರಲು
ಬೇಸಿಗೆಯ ಬಿಸಿಲಲಿ
ಬಿಸುಸುಯ್ದ ಜೀವಕೆ
ತಂಪನೆರೆವ ವಸಂತದ
ಮೇಘವರ್ಷ ನೀನಾದೆ
ಗೆಳತಿ…

ನನ್ನ ಕಂಗಳಂಗಳದಲಿ
ಆನಂದಭಾಷ್ಪದ ಎರೆಡು
ಹನಿಗಳ ಜೊತೆ, ನನ್
ಹೃದಯ ತುಂಬಿ ಬಂತು..

ಮರಳುಗಾಡಿನ ಮರಳ
ರಾಶಿಯ ನಡುವೆ
ಸುರಿದ ಎರಡು ಹನಿಗಳಂತೆ
ಆ ನಿನ್ನ ಜೊತೆ ಕಳೆದ
ಕೆಲ ಕ್ಷಣಗಳು ಕಳೆದುವಲ್ಲ

ಬೆವರ ಹನಿಗಳ ಬಿಸಿಯ
ತಣಿಸಲೇ ಬೀಸಿದ ಗಾಳಿಯಂತೆ
ಆ ನಿನ್ನ ಮಾತುಗಳು
ವಸಂತ ಮೇಘವರ್ಷ ನೀನಾದೆ
ಗೆಳತಿ…

ಚಿತ್ರ: ಪವಿತ್ರ