ವಿಕಿಪೀಡಿಯಕ್ಕೆ ನೀವು, ನೀವೇ ತೆಗೆದ ಚಿತ್ರಗಳನ್ನು ಹಾಕಬಹುದೇ ಹೊರತು, ಬೇರೆಯವರ ಫೋಟೋಗಳನ್ನಲ್ಲ.. ಅವರ ಹೆಸರನ್ನು ನಮೂದಿಸಿದ್ದರೂ, ನಿಮಗೆ ಆ ಚಿತ್ರವನ್ನು ಮರು ಪ್ರಕಟಿಸುವ, ಉಪಯೋಗಿಸುವ ಯಾವುದೇ ಹಕ್ಕನ್ನು ಮೂಲ ಚಿತ್ರಕಾರ ಕೊಟ್ಟಿರುವುದಿಲ್ಲವಾದ್ದರಿಂದ ನೀವು ಅಪ್ಲೋಡ್ ಮಾಡುವ ಹಕ್ಕನ್ನು, ಅದನ್ನು ನಿಮ್ಮ ಹೆಸರಿನಲ್ಲಿ ವಿಕಿಪೀಡಿಯ ಬಳಸುವ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ನಡಿ ನೀಡುವುದು ಸಾಧ್ಯವಿಲ್ಲ. ವಿಕಿಪೀಡಿಯ ಬಳಕೆ, ಲೈಸೆನ್ಸ್‌ಗಳ ಜೊತೆಗೆ ಒಮ್ಮೆ ಓದಿಕೊಳ್ಳಿ. ನಿಮ್ಮ ಉದ್ದೇಶ ಒಳ್ಳೆಯದಿದ್ದರೂ ಕೂಡ, ಬೇರೆಯವರ ಚಿತ್ರಗಳನ್ನು ಅವರ ಬಳಿಯಿಂದಲೇ ನೇರವಾಗಿ ವಿಕಿಪೀಡಿಯ ಕಾಮನ್ಸ್‌ಗೆ ಕೊಡುಗೆ ನೀಡಲು ಹೇಳುವುದು ಒಳಿತು. ಲೇಖನಗಳಿಗೆ ಚಿತ್ರಗಳು ಇರಲೇ ಬೇಕೆಂದಿಲ್ಲ.. ನೀವು ಬರೆದ ಲೇಖನ ಓದಿದ ಮತ್ಯಾರೋ ಅವರೇ ತೆಗೆದ ಚಿತ್ರಗಳನ್ನು ಮುಂದೆ ಹಾಕಬಹುದು.
ವಿಕಿಪೀಡಿಯ ಲೈಸೆನ್ಸ್ ಬಗ್ಗೆ, ಇಲ್ಲಿ ಬೇರೆಯವರ ಕೃತಿಗಳಿ ಇತ್ಯಾದಿಗಳನ್ನು ಸೇರಿಸುವುದರ ಬಗ್ಗೆ ಕೇಳಿ ತಿಳಿದುಕೊಳ್ಳಿ ಅಥವಾ ಈ ಜಾರುತಟ್ಟೆಗಳನ್ನು ಓದಿ :-
ಈ ನಿಯಮವನ್ನು ಪಾಲಿಸದಿದ್ದಲ್ಲಿ, ಅಂತಹ ಚಿತ್ರಗಳನ್ನು ಅನಾಮತ್ತಾಗಿ ವಿಕಿಪೀಡಿಯದ ಬಾಟ್‌ಗಳು (ಆಟೋಮೇಟೆಡ್ ಆಗಿ ರನ್ ಆಗುವ ಪ್ರೋಗ್ರಾಮ್) ತಂತಾನೇ ತೆಗೆದುಹಾಕುತ್ತವೆ. ಈ ಎಚ್ಚರಿಕೆಯ ಬಗ್ಗೆ ಪರವಾನಗಿಯ ವಿಭಾಗದಲ್ಲಿ ಬರುವ ಸಂದೇಶವನ್ನು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ ತಿಳಿದುಕೊಳ್ಳಬಹುದು.