ಏರ್‌ಸೆಲ್ ಕರ್ನಾಟಕದ ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥ ಕೆ.ಕಧಿರವನ್ ಏರ್‌ಟೆಲ್ ತನ್ನ ಡೇಟಾ ಪ್ಲಾನ್‌ಗಳ ಲಭ್ಯತೆ, ಏರ್‌ಟೆಲ್ ಹೇಗೆ ಇತರೆ ಟೆಲಿಕಾಂ ಕಂಪೆನಿಗಳಿಗಿಂತ ಭಿನ್ನ ಮತ್ತು ಅತ್ಯುತ್ತಮ ಸೇವೆಯನ್ನು (ಡೇಟಾ ಸಂಬಂಧಿತ) ನೀಡುತ್ತಿದೆ ಎಂದು ವಿವರಿಸಿದರು.
ವಿಕಿಪೀಡಿಯನ್ ರಾಧಕೃಷ್ಣ, ಭಾರತೀಯ ವಿಕಿಪೀಡಿಯ ಭಾಷೆಗಳ ಲಭ್ಯತೆ ಮತ್ತು ಅದರ ಬಳಕೆಯ ಬಗ್ಗೆ ಬೆಳಕು ಚೆಲ್ಲಿದರೆ, ಬ್ಲಾಗಿಗರ ಪ್ರಶ್ನೆಗಳಿಗೆ ಕಾರ್ಯಕ್ರಮದಲ್ಲಿ ಲಭ್ಯವಿದ್ದ ಇತರೆ ವಿಕಿಪೀಡಿಯನ್ನರಾದ ಟೀನು ಚೆರಿಯನ್, ಸುಭಾಶಿಷ್, ಪವನಜ ಹಾಗೂ ಓಂಶಿವಪ್ರಕಾಶ್ ಉತ್ತರಿಸಿದರು.
ಏರ್‌ಟೆಲ್‌ನ ಕದಿರವನ್ ಮತ್ತು ಇತರರು ತಮ್ಮ ಸೇವೆಯ ಸಮಯದಲ್ಲಿ ಕೇಳಿಬರುವ ಫಾಂಟ್ ರೆಂಡರಿಂಗ್ ತೊಂದರೆ, ಭಾರತೀಯ ಭಾಷಾ ಕೀಬೋರ್ಡ್‌ಲಭ್ಯತೆ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
ಏರ್‌ಟೆಲ್ ಜೊತೆಗಿನ ಸಂಬಂಧವೃದ್ದಿ ಮತ್ತು ಇನ್ನೂ ಹೆಚ್ಚಿನ ಜನರಿಗೆ ಈ ಉಚಿತ ಸೇವೆಯ ಬಗ್ಗೆ ತಿಳಿಸುವ ಅವಶ್ಯಕತೆ, ವಿಕಿಪೀಡಿಯನ್ನರ ಜೊತೆಗೆ ಈ ಯೋಜನೆಯಲ್ಲಿ ಭಾಗವಹಿಸುವ ಅವಕಾಶಗಳ ಕುರಿತು ಅಧ್ಯಯನ ಮಾಡಲು ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳಲು ವಿಕಿಮೀಡಿಯದ ಕ್ಯಾರೋಲಿನ್ ಇತ್ತೀಚೆಗೆ ಭಾರತದ ಪ್ರವಾಸದಲ್ಲಿದ್ದು, ಅವರ ಬೆಂಗಳೂರಿನ ಪ್ರವಾಸ ಮೊಬೈಲ್ ಮೂಲಕ ಮುಕ್ತ ಜ್ಞಾನದ ಹಂಚಿಕೆಯ ಮುಂದಿನ ದಿನಗಳ ಬಗ್ಗೆ ಆಶಾಕಿರಣ ಮೂಡಿಸಿತು.