ಹೊಳೆವ ಚಂದ್ರನ ದಿನವು ಚುಂಬಿಸಿ
ಮಿನುಗು ನಕ್ಷತ್ರಗಳ ಜೊತೆ ನಲಿದು
ಸುಡುವ ಬೇಸಿಗೆಯಲ್ಲಿ ತಂಪ ಕಂಡು
ಅದೃಶ್ಯ ಶಕ್ತಿಯ ಇರುವನ್ನನುಭವಿಸಿರುವೆ

ಸೃಷ್ಟಿಯ, ಮುಗಿಲೆತ್ತರದ ಗಿರಿಶಿಖರಗಳ ಕಂಡಿರುವೆ
ಪ್ರೇಮಾಮೃತವನ್ನು ಪವಿತ್ರ ಗಂಗೆಯಲ್ಲಿ ಸವಿದಿರುವೆ
ಉತ್ಕಟ ಬಯಕೆಯ ಉಕ್ಕಿಸುವ ತುಟಿಯ ಕಂಡಿರುವೆ
ಪತಂಗವಾದ ಅಭಾಸವಾಗಿದೆ, ನೂರಾರುಸಲ ಎನಗೆ

ಪವಾಡಗಳನ್ನೂ ,
ನೋವು ಮಾಸುವುದನ್ನೂ ಕಂಡಿರುವೆ ನಾನು
ಆದರೆ ನನ್ನ ವಿಸ್ಮಿತನನ್ನಾಗಿಸಲು ನೀ ಮಾಡುವ
ಎಷ್ಟೋ ಕೆಲಸಗಳು ನಾ ಬೇರೆಲ್ಲೂ ಕಂಡಿಲ್ಲ…

ಜಿಗುಪ್ಸೆಯಾದಾಗ ಎಚ್ಚರಿಸಿದೆ ನೀನು
ಸ್ಪರ್ಶದಿಂದಂಮೃತದ ದಾರೆ ಎರೆದೆ
ನಾನರಿಯದ ಕೆಲಸಗಳ ಸಾಧಿಸಿಹೆ ನೀನು
ಸಂಯಮ ಕಳೆದ ಪಶುವಾಗಿಹೆ ನಾನು
ಏಕೆಂದರೆ, ನೀನೆ ನನ್ನ ಜೀವನ ಸೆಲೆಯು…

ಕಂಡರಿಯದ ಕನಸ ಕಂಡೆ
ರವಿಯು ಶರಧಿಯ ಮೋಹಿಪುದ ಕಂಡೆ
ಶಶಿಗೆ ದಿನ ಚುಂಬನದ ಮಳೆಗರೆಯುತ್ತ
ನಾ ಕನಸಿನಪ್ಸರೆಯರ ಜೊತೆಗೂಡಿ ಕಾಲಕಳೆದೆ.
ವಿಲ್ ಯೂ ಬಿ ಮೈ ವ್ಯಾಲೆಂಟೈನ್

%d bloggers like this: