ಸಮಯವು ಜಾರುತಿಹುದಲ್ಲ
ಕೈಯಲ್ಲಿಟ್ಟ ಬೆಣ್ಣೆ ನೀರಾಗಿ ಸೋರುವ ತೆರದಿ

ನೆನ್ನೆ ತಾನೇ ಶುರುವಾದ ಹೊಸ ವರ್ಷ
ಅದರಲ್ಲಿ ಮುಗಿದ ದಿನಗಳು ಏಳು…
ವಾರ ಮುಗಿಯುವ ವೇಳೆ,
ಮುಗಿಯುತ್ತಿರುವ ಮಾಸದ ನೆರಳು…

ಕೆಲಸವಿಲ್ಲದೆ ಕಳೆದ ರಜೆಯ ನಡುವೆ
ಯೋಚಿಸಿರಲೇ ಇಲ್ಲ ನಾನು..
ಕೆಲಸ ಮಾಡಬೇಕೀಗ ಮತ್ತೆ
ಸಮಯದ ಪರಿವೆಯಿಲ್ಲದೆ, ಅಲ್ವೇನು??

ಅಯ್ಯೋ, ಸಮಯ
ಸರಿದೇ ಹೋಗುತ್ತಿದೆ
ಸೋರಿ ಹೋಗುತ್ತಿದೆ…
ಜಾರಿ ಹೋಗುತ್ತಿದೆ….
ಎಂದು ಮತ್ತೆ ಅವಸರಿಸುತ್ತಿದೆ ಈ “ನನ್ ಮನ”