ಪ್ರತಿ ಮನೆಯ ಸೂರಿನಡಿ
ಇರಲಿ ಸಣ್ಣದೊಂದು ಬೆಳಕ ಬಿಂಬ!
ಮಬ್ಬಿನಲಿ ಅಳುವ ಮಕ್ಕಳ 
ಸಂತೈಸಲಿಕ್ಕೆ
ನಾಳಿನ ಕನಸುಗಳ ಕಟ್ಟುವ
ಕಂದಮ್ಮಗಳ ಓದಿಗೆ
ದುಡಿದು ದಣಿದು ಬಂದ ದೇಹಕೆ
ತಂಪನೆ ಗಾಳಿ ಬೀಸಲಿಕ್ಕೆ
ಬೆಳಗಿನಿಂದ ಹಸಿದಿರುವ ಹೊಟ್ಟೆಗೆ 
ಊಟ ಬಡಿಸಲಿಕ್ಕೆ
ನಿದ್ರಿಸುವ ಮುನ್ನ ಗುಂಯ್ ಗುಡುವ
ಸೊಳ್ಳೆ ಓಡಿಸಲಿಕ್ಕೆ
ನಿಲ್ಲದು ಈ ಪಟ್ಟಿ…
ಶಿವನ ಸಮುದ್ರದ ನೀರೆಲ್ಲ
ಬತ್ತಿಸಿ ಊರ ಹೊತ್ತಿಸಿದರೂ
ಹುಟ್ಟುವ ನಾಳೆಗಳ ಬಸಿರಲ್ಲೇ 
ಮತ್ತಷ್ಟು ಬೇಕುಗಳ ಬೇಡಿಕೆ!
ಕಪ್ಪು ಬಂಗಾರವನ್ನೂ 
ಕರಗಿಸಿ ಬೆಳಕ ನೀಡುವರಂತೆ
ಎಷ್ಟು ದಿನ ನೆಡೆದೀತು ಈ ಆಟ?
ಚಿತ್ರ: ೨೮ನೇ ಮಾರ್ಚ್ ರಂದು ಕಾಮತ್ ಲೋಕರುಚಿಯಲ್ಲಿ ತೆಗೆದದ್ದು, ರಾಮನಗರ