ಹೊಸ ಕ್ಯಾಮೆರಾದಲ್ಲಿ ಸೂರ್ಯನ ಕಡೆಗದನು ಮುಖ ಮಾಡಿ ನೋಡಿದ ಪವಿತ್ರಾಗೆ – ಮೊದಲ ಚಿತ್ರದ ಮೇಲೆ ಹೀಗೊಂದು ಕಾಮೆಂಟು



ಸೂರ್ಯಾಸ್ತಮಾನದತ್ತ ಒಂದು ನೋಟ
ರಂಗಿನ ರಂಗಸ್ಥಳದಲಿ ಕಾಣುತ್ತಿದೆಯೇ ಮಾಟ….

ಇಣುಕಿ ನೋಡಿತ್ತು ನನ್ನ ಹೊಸ ಕ್ಯಾಮೆರಾ,
ಸೆರೆ ಹಿಡಿದಿತ್ತು ಜಗತ್ತಿನ ನೀರವ ಸಂಜೆಯ,
ನಿದ್ದೆಗೆಟ್ಟು ದಿನವೆಲ್ಲಾ ದುಡಿದ ಜನರ ಮನೆಗಳ,
ಹಕ್ಕಿಗಳೂ ಏಕೋ ಬೇಗನೆ ಮನೆ ಸೇರಿಯಾಗಿತ್ತು
ಚಂದ್ರನ ಬರುವಿಗೂ ಕಾಯಲಿಕ್ಕಿಲ್ಲ ನೇಸರ
ದಿನವಿಡಿ ಬಿರು ಬಿಸಿಲಲಿ ಕಾದ ಭೂಮಿಗೆ
ಈಗ ಕೆಂಪಾದ ಸೂರಿನಡಿ ತಂಪಿನ ಹವಾ….
ಏನೆಲ್ಲಾ ಸೆರೆ ಹಿಡಿದಿದೆಯಲ್ಲಾ!

ಹಾ ಹಾ!… ಮತ್ತೂ ಇನ್ನಷ್ಟು ದೃಶ್ಯಗಳ
ಸೆರೆಹಿಡಿಯುತ್ತಿರಲಿ ಈ ಮಾಟಗಾರ….

ಮತ್ತೊಮ್ಮೆ ಹೊಸ ಕ್ಯಾಮೆರಾಗೂ ನಿಮಗೂ ಅಭಿನಂದನೆಗಳು 😉