ಹೀಗೇ ಬರೆಯುತ್ತಿರಿ ನೀವು
ಕನ್ನಡದಲ್ಲಿ…
ಮತ್ತಿಷ್ಟು ಕಥೆಯ ಹೆಣೆಯುತ್ತಿರಿ
ಕನ್ನಡದಲ್ಲಿ…
ನಿಜ ಜೀವನದ ಪುಟಗಳ ಸೇರಿಸುತ್ತಿರಿ
ಕನ್ನಡದಲ್ಲಿ…
ಯಾರೋ ಓದಲೇ ಬೇಕೆನ್ನದೆ ಬರೆಯುತ್ತಿರಿ
ಕನ್ನಡದಲ್ಲಿ…
ಯಾರೋ ನಕ್ಕಾರು ಎಂದು ನಿಲ್ಲಿಸದಿರಿ ಬರೆಯುವುದ
ಕನ್ನಡದಲ್ಲಿ…
ನಿಮ್ಮ ನೆನಪಿನ ಮೆರವಣಿಗೆ ಸಾಗಲಿ ಸರಾಗವಾಗಿ
ಕನ್ನಡದಲ್ಲಿ…
ಬರೆದು ಬಿಡಿ ಮನಸ್ಸಿನಲ್ಲಿರುವ ಎಲ್ಲ ಮೆಲುಕುಗಳ
ಕನ್ನಡದಲ್ಲಿ..
ಹೀಗೇ ಬರೆಯುತ್ತಲೇ ಇರಿ
ಅಚ್ಚ ಕನ್ನಡದಲ್ಲಿ
— ಕನ್ನಡದಲ್ಲಿ ತನ್ನ ದಿನಚರಿಯ ಬರೆಯಲೆತ್ನಿಸಿದ ಗೆಳತಿ ಪವಿತ್ರಾಗೆ..