ಎಲ್ಲರಿಗೂ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನಿಸುವುದು ಸಹಜ. ಆದರೆ ನಮ್ಮಲ್ಲನೇಕರಿಗೆ ನಾನೇನು ಮಾಡಬಲ್ಲೆ ಎಂಬ ಪ್ರಶ್ನೆ ಕಾಡಿದರೆ,  ಮತ್ತಿನ್ನಿತರರಿಗೆ ಎಲ್ಲಿಂದ ಕೆಲಸ ಶುರುಮಾಡಲಿ ಎಂಬ ಪ್ರಶ್ನೆ. ಅದನ್ನೂ ಮೀರಿದರೆ ನನಗೆ ಕಂಪ್ಯೂಟರ್ ಅಷ್ಟುಗೊತ್ತಿಲ್ಲ ನಾನು ಇದರಲ್ಲಿ ಕೆಲಸ ಮಾಡ್ಲಿಕ್ಕೆ ಸಾಧ್ಯ ಇಲ್ಲ ಎಂದು ಕೈಕಟ್ಟಿ ಕೂರುತ್ತೇವೆ.

ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ತಮ್ಮ ಹವ್ಯಾಸ, ಉದ್ಯೋಗ ಇತ್ಯಾದಿಗಳ ಸುತ್ತಲೇ ಹತ್ತಾರು ವಿಷಯಗಳ ಮೂಲಕ ಭಾಷೆ ಹಾಗೂ ತಂತ್ರಜ್ಞಾನದ ಅಭಿವೃದ್ದಿಯ ನೆರವಿಗೆ ನಿಲ್ಲಬಹುದು. ಸಾಧ್ಯಾಸಾಧ್ಯತೆಗಳ ಇಂತಹ ಹತ್ತಾರು ವಿಷಯಗಳನ್ನು, ಪ್ರಾಯೋಗಿಕವಾಗಿ ಇಂತಹ  ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ಅನುಭವಿ ತಂತ್ರಜ್ಞರು ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತ ನೀವೂ ಅವರೊಂದಿಗೆ ಹೆಜ್ಜೆಯಿಡಲು ೨೨ನೇ ಜನವ ರಿ ೨೦೧೨ ರಂದು ಹೆಜ್ಜೆ ವೇದಿಕೆ ಸಿದ್ದವಾಗುತ್ತಿದೆ.

ಇದು ಬರೀ ಮಾಹಿತಿತಂತ್ರಜ್ಞಾನ ಅಥವ ಐ.ಟಿ ಮಂದಿಗಲ್ಲ… ಯಾರುಬೇಕಾದರೂ ಭಾಗವಹಿಸಬಹುದು. ವಿಶೇಷವಾಗಿ ಮಹಿಳೆಯರು ಕೂಡ ತಂತ್ರಜ್ಞಾನದ ವಿಷಯದಲ್ಲಿ ಕೆಲಸ ಹೇಗೆ ಮಾಡಬಲ್ಲರು, ಸಹಾಯ ದೊರೆಯುತ್ತದೆಯೇ, ಅವರೂ ಸಮುದಾಯ ಕಟ್ಟುವ ನಿಟ್ಟಿನಲ್ಲಿ ಹೇಗೆ ಎಲ್ಲರೊಂದಿಗೆ ಹೆಜ್ಜೆ ಇಡಬಲ್ಲರು ಎಂಬುದನ್ನೂ ತಿಳಿಯಬಹುದು.

ನಮ್ಮೆಲ್ಲರ ನೆಚ್ಚಿನ ವಿಜ್ಞಾನ ಲೇಖಕ ಶ್ರೀ ನಾಗೇಶ್ ಹೆಗಡೆ, ವಸುದೇಂದ್ರ ಮುಂತಾದವರು ನಮ್ಮ ಜೊತೆಗಿದ್ದರೆ, ಕನ್ನಡದ ಮೊದಲ ಅಂತರ್ಜಾಲ ತಾಣ “ವಿಶ್ವಕನ್ನಡ.ಕಾಮ್” ರೂಪಿಸಿ ಗಣಕಿಂಡಿ, ಗ್ಯಾಜೆಟ್ ಲೋಕ ಇತ್ಯಾದಿಗಳ ಮೂಲಕ ದಿನನಿತ್ಯ ನಮ್ಮೊಡನೆ ಸಂಪರ್ಕದಲ್ಲಿರುವ ಡಾ| ಯು.ಬಿ ಪವನಜ ಕೂಡ ಬೆಂಬಲಕ್ಕಿದ್ದಾರೆ.

ಇನ್ನೂ ಹಲವಾರು ವಿಶೇಷಗಳು ಎಲ್ಲರಿಗೂ ಕಾದಿದೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜಿಸುತ್ತಿರುವ “ಸಂಚಯ” ತಂಡ. 

ಸಂಚಯ ತಂತ್ರಜ್ಞಾನವನ್ನು ಜನಸಾಮಾನ್ಯನೆಡೆಗೆ ಸುಲಭವಾಗಿ ತರಲು ತೆರೆಯ ಹಿಂಬದಿಯಲ್ಲಿ ಇದುವರೆಗೆ ಕೆಲಸ ಮಾಡುತ್ತಿದ್ದು, ‘ಅರಿವಿನ ಅಲೆಗಳು’- ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಸಂಭಂದಿತ ಕನ್ನಡದ ಮೊದಲ ಇ-ಪುಸ್ತಕವನ್ನು ೨೦೧೧ರ ಸ್ವಾತಂತ್ರೋತ್ಸವಕ್ಕೆ ಕನ್ನಡಿಗರಿಗಾಗಿ ಹೊರತಂದಿತ್ತು.

ಕನ್ನಡಕ್ಕೆ ಏನಾದರೂ ಮಾಡುತ್ತೇನೆ ಎಂದರೆ ಸಾಲದು, ಎದ್ದು ಕಾರ್ಯೋನ್ಮುಖರಾಗಿ ಎಂದು ಎಲ್ಲರಿಗೂ ಹುರಿದುಂಬಿಸುತ್ತಿರುವ ಕಾರ್ಯಕ್ರಮದಲ್ಲಿ …
Hejje