ದಿನ ದಿನವೂ ಯಂತ್ರಗಳ ನಡುವೆ
ಯಾಂತ್ರಿಕವಾಗಿ ಪಯಣಿಸುತಿರುವಾಗ
ಮಬ್ಬಾಗಿ ಉರಿಯುತಿರುವ ಆ ಎಲ್ಲಾ
ಕೊಳವೆ ದೀಪಗಳ ಬಿಟ್ಟು
ಜಗವನ್ನೇ ತನ್ನ ಸ್ವರ್ಣ ಕಿರಣಗಳ
ಕಾಂತಿಯಿಂದ ಬೆಳಗಿ
ಹೊಸ ದಿನದ ಹೊಸತನವ
ಹೊಸ ಜೀವಗಳಿಗೆ ಅರಿವೀಯ್ವ
ನೇಸರನ ಉದಯವನು
ಅವನು ಅಸ್ತಂಗತನಾಗುವುದನ್ನೂ
ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಾ
ಅದೆಲ್ಲೋ ಸಮುದ್ರದ ದಂಡೆಯ ಮೇಲೆ
ದೂರದ ನವ ನಾವಿಕನ ನಿರೀಕ್ಷೆಯಲ್ಲಿಯೋ ಎಂಬಂತೆ
ಹೊಸ ಬೆಳಕಿನೆಡೆಗೆ…