ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)ಮತ್ತು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3190 Rotary International District 3190 ಜಂಟಿಯಾಗಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಮ್ಮೆಲ್ಲರ ಹೆಮ್ಮೆಯ Padmanbha Rao  ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನಲ್ಲಿ ನೆಡೆದ ಈ ಕಾರ್ಯಕ್ರಮದಲ್ಲಿ ಅವರು ನೇರವಾಗಿ ಭಾಗವಹಿಸಲು ಸಾಧ್ಯವಾಗದಿದ್ದರಿಂದ, ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿದ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಬಿತ್ತರಿಸಲಾಯಿತು. ಡಿಜಿಟಲ್ ಕನ್ನಡದ ಕನಸುಗಳನ್ನು ಕಟ್ಟುವವರಿಗೆಲ್ಲರಿಗೂ ನಗುನಗುತ್ತಾ ಬೆಂಬಲ ನೀಡುವ, ಸಲಹೆ ಸೂಚನೆಗಳನ್ನು ನೀಡುವ ಶ್ರೀ ಕೆ. ಪಿ ರಾವ್ ಅವರ ಜೊತೆಗೆ ನನಗೂ ವೇದಿಕೆ ಹಂಚಿಕೊಳ್ಳುವ ಭಾಗ್ಯ ಒದಗಿ ಬಂತು. ಇದು ನನ್ನ ಪುಣ್ಯವೇ ಸರಿ ಕನ್ನಡ ಡಿಜಿಟಲೀಕರಣಕ್ಕೆ ಸಮುದಾಯದ ಸುತ್ತಲಿನ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ನೀಡಿದ ರೋಟರಿ ಹಾಗೂ ಎಫ್‌ಕೆಸಿಸಿಐ ಸಂಸ್ಥೆಗಳಿಗೆ ಮತ್ತು ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು. ಕನ್ನಡದ ಕೆಲಸಗಳನ್ನು ಪರದೆಯ ಹಿಂದೆ ನಿಂತು ಮುಗಿಸಲು ಇಚ್ಚಿಸುವ ಕೆಲಸಗಳಿಗೆ ಪರದೆ ಆಚೆಗಿನ ಕನ್ನಡಿಗರು ಶಕ್ತಿ ತುಂಬಿದರೆ, ಮತ್ತಷ್ಟು ಕನ್ನಡದ ಕಾಯಕಗಳಿಗೆ ಪ್ರೇರಣೆ ಸಿಗುತ್ತದೆ ಎಂದು ನಂಬಿದ್ದೇನೆ.