ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಕಿಪೀಡಿಯ ದೇಶದ ವಿವಿದೆಡೆಗಳಲ್ಲಿ ಮಹಿಳಾ ಸಮ್ಮಿಲನಗಳನ್ನು ಹಮ್ಮಿಕೊಂಡಿದೆ. 
ಅದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿ ಲಭ್ಯ:
ಜೊತೆಗೆ ಬೆಂಗಳೂರಿನಲ್ಲಿಯೂ ಅನೇಕ ಮಹಿಳೆಯರು ಒಂದೆಡೆ ಸೇರಿ ೯, ಮಾರ್ಚ್ ೨೦೧೩ರಂದು ವಿಕಿಪೀಡಿಯ  ಬಗ್ಗೆ ಅರಿತುಕೊಂಡರು. ಜೊತೆಗೆ ವಿಕಿಸಂಪಾದನೆಗೂ ತೊಡಗಿದರು. ಪವಿತ್ರ ಈ ಸಮ್ಮಿಲನ ನೆಡೆಸಿಕೊಟ್ಟರು. 
ಈ ಕಾರ್ಯಕ್ರಮದ ಸಂದರ್ಭದಲ್ಲಿ ಕನ್ನಡದ ಮಹಿಳೆಯರ ಪುಟಗಳನ್ನೂ ಸಂಪಾದಿಸಲು ಸಾಧ್ಯವಾಗಬೇಕು ಎಂಬ ಆಶಯದಿಂದ ಈ ಕೆಳಗಿನ ಕೊಂಡಿಯನ್ನು ಸಿದ್ದಪಡಿಸಿದ್ದೇವೆ. ಕನ್ನಡ ವಿಕಿಪೀಡಿಯ ಸುತ್ತ ಕೆಲಸ ಮಾಡುತ್ತಿರುವ ಮಹಿಳೆಯರು ಇದರತ್ತ ಗಮನ ಹರಿಸಬೇಕೆಂದು ಕೋರಿಕೆ. 

ವಿಕಿಪೀಡಿಯ:ಸಮ್ಮಿಲನ/ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ ೨೦೧೩, ಭಾರತ

* ಕುಮಾರವ್ಯಾಸನ ವ್ಯಾಸ ಭಾರತದ ಪರ್ವಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದರ ಮೂಲಕ ಸವಿತಾ ಎಸ್. ಆರ್ ಮಹಿಳಾ ದಿನದ ಆಚರಣೆಯಲ್ಲಿ ತೊಡಗಿದ್ದಾರೆ. 
* ಶ್ಯಾಮಲಾ ಜನಾರ್ಧನ್ ಹರಿಕಥಾಮೃತ ಸಾರವನ್ನುವಿಕಿಪೀಡಿಯದ ವಿಕಿಸೋರ್ಸ್‌ಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. 
* ಸಮ್ಮಿಲನದ ದಿನ ಡಾ. ಸುಮಿತ್ರ ಬೆಂಗಳೂರಿನವರೇ ಆದ ಭಾರತದ ಫಿಷರ್ ವುಮನ್ ಎಂದೇ ಖ್ಯಾತಿ ಪಡೆದ ನಳಿನಿ ನಾಯಕ್ ಅವರ ಬಗ್ಗೆ ತಿಳಿಸಿ, ಅವರಿಗೆ ಸಂಬಂಧಿಸಿದ ಪುಟದ ಸಂಪಾದನೆಯಲ್ಲಿ ತೊಡಗಿದರು. 
* ಲಕ್ಷ್ಮಿಚೈತನ್ಯ ಅನೇಕ ಸಾಧಕಿಯರ ಪರಿಚಯವನ್ನು ವಿಕಿಪೀಡಿಯ ಮೂಲಕ ಮಾಡಿಕೊಡಲು ಮುಂದೆ ಬಂದಿದ್ದಾರೆ. 
ಈಗ ನಿಮ್ಮ ಸರದಿ, ನಿಮ್ಮ ನೆಚ್ಚಿನ ನಟಿ, ಲೇಖಕಿ, ಕ್ರೀಡಾಪಟು, ಅಥವಾ ನಿಮ್ಮ ಸುತ್ತಲಿನ ಸಾಧಕಿಯರನ್ನು ವಿಕಿಪೀಡಿಯದ ಮೂಲಕ ಇತರರಿಗೆ ಪರಿಚಯ ಮಾಡಿಕೊಡಿ.