ವಿಕಿಪೀಡಿಯದ ಪುಟಗಳಲ್ಲಿ ನಾವು ಸೇರಿಸುವ ಪ್ರತಿಯೊಂದೂ ವಿಷಯವನ್ನು ಉಲ್ಲೇಖಗಳ ಮೂಲಕ ರುಜುವಾತು ಮಾಡಬೇಕಾಗುತ್ತದೆ. ಇದಕ್ಕಾಗಿ ref ಟ್ಯಾಗ್ ಬಳಸುವುದು ವಾಡಿಕೆ. ಜೊತೆಗೆ ಸೇರಿಸಿದ ರೆಫರೆನ್ಸುಗಳನ್ನು  ಪುಟದ ಕೊನೆಯಲ್ಲಿ ಸೇರಲು ==ಉಲ್ಲೇಖಗಳು== ಎಂಬ ವಿಷಯ ಸೇರಿಸಿ ಅದರ ಕೆಳಗೆ  references ಟ್ಯಾಗ್ ಸೇರಿಸಿದರೆ, ಎಲ್ಲ ಉಲ್ಲೇಖಗಳು ಒಂದರ ಕೆಳಗೆ ಒಂದು ಜೋಡಿಸಲ್ಪಡುತ್ತವೆ.  ಇದರ ಒಂದು ಪುಟ್ಟ ಉದಾಹರಣೆ ಇಲ್ಲಿದೆ.

ಚಿತ್ರ ೧

ಇಲ್ಲಿ “ಪದ್ಮ ಪ್ರಶಸ್ತಿ ವಿಜೇತರು ೨೦೧೪” ಎಂಬ ವಿಷಯಕ್ಕೆ ಸಂಬಂಧಿಸಿದ ಪ್ರಜಾವಾಣಿಯ ಕೊಂಡಿಯನ್ನು ಉಲ್ಲೇಖಿಸಲಾಗಿದೆ. ಕೆಳಗೆ ಎಂದು ಸೇರಿಸಿದಾಗ ಮೇಲೆ ಕಾಣುವಂತೆ ಉಲ್ಲೇಖದ ಪಟ್ಟಿ ಬರುತ್ತದೆ. 

ಆಗಲೇ ಹೇಳಿದಂತೆ ಬರೆಯುವುದರ ಉದಾಹರಣೆ ಕೆಳಕಂಡಂತೆ ಇರುತ್ತದೆ. 

ಚಿತ್ರ ೨
ಇದು ಎಷ್ಟು ಕಷ್ಟ ಅಲ್ಲವೇ? ಇದನ್ನು ಸುಲಭವಾಗಿಸಲು ಇಂಗ್ಲೀಷ್ ವಿಕಿಪೀಡಿಯದಲ್ಲಿ ProveIT ಎಂಬ ಗ್ಯಾಜೆಟ್ ಒಂದಿದ್ದು, ಬಹಳ ದಿನಗಳಿಂದ ಅದನ್ನು ಬಳಸುತ್ತಿದೆ. ಕನ್ನಡ ವಿಕಿಪೀಡಿಯದಲ್ಲಿ ಹೆಚ್ಚು ಎಡಿಟ್ ಮಾಡುವಾಗ ರೆಫರೆನ್ಸ್ ಸೇರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಇದನ್ನು ವಿಕಿಪೀಡಿಯದ ಅರಳಿ ಕಟ್ಟೆಯಲ್ಲಿ ಪ್ರಸ್ತಾಪಿಸಿ, ಎಲ್ಲರಿಗೂ ಇದರ ಅವಶ್ಯಕತೆಯನ್ನು ವಿವರಿಸಿ ಎಲ್ಲರ ಒಪ್ಪಿಗೆ ಸಿಕ್ಕ ನಂತರ ಎಂ.ಜಿ ಹರೀಶ್ ಅದನ್ನು ಕನ್ನಡ ವಿಕಿಪೀಡಿಯದಲ್ಲಿ ಎನೇಬಲ್ ಮಾಡಿದರು. 
ಇದರ ಬಳಕೆ ಬಹಳ ಸುಲಭ. ಅದನ್ನು ಈ ಕೆಳಗೆ ವಿವರಿಸುತ್ತಿದ್ದೇನೆ. ಮೊದಲು ಪ್ರೂವ್ ಇಟ್ ಅನ್ನು ನಿಮ್ಮ ವಿಕಿಪೀಡಿಯ ಅಕೌಂಟ್ ಪ್ರಾಶಸ್ತ್ಯದಲ್ಲಿ ಎನೇಬಲ್ ಮಾಡಿಕೊಳ್ಳಬೇಕು. 
ಚಿತ್ರ ೩
ಇದಾದ ನಂತರ ಯಾವುದಾದರೂ ಪುಟವನ್ನು ಸಂಪಾದಿಸಲು ಪ್ರಾರಂಭಿಸಿದಾಗ [ProveIt] ಎಂಬ ಬಟನ್ ನಿಮ್ಮ ಪುಟದ ಕೊನೆಯಲ್ಲಿ ಕಾಣುವುದು. ಅದರ ಬಲ ಮೂಲೆಯಲ್ಲಿರುವ ^ ಚಿನ್ಹೆ  ಕ್ಲಿಕ್ಕಿಸಿ  ಅದರಲ್ಲಿ ವೆಬ್, ಪುಸ್ತಕ, ಜರ್ನಲ್ ಹೀಗೆ ಬೇರೆ ಬೇರೆ ರೀತಿಯ ಉಲ್ಲೇಖನಗಳನ್ನು ಸೇರಿಸುವ ಅವಕಾಶವಿದೆ.  ಪದ್ಮ ಪ್ರಶಸ್ತಿಯ ಪ್ರಜಾವಾಣಿ ಕೊಂಡಿ ಸೇರಿಸಿದ್ದನ್ನು ನಿಮಗಿಲ್ಲಿ ತೋರಿಸಿದ್ದೇನೆ. 
ಚಿತ್ರ ೪
ಈಗ ನೀವು ಉಲ್ಲೇಖಿಸ ಬೇಕು ಎಂದಿರುವ ಸಾಲಿನ ಕೊನೆಯಲ್ಲಿಯೋ, ಪದದ ನಂತರವೋ ಕರ್ಸರ್ ತಂದು “Insert into edit form” ಎಂದು ಕಾಣುವ ಬಟನ್ ಪ್ರಸ್ ಮಾಡಿದರೆ ಆಯ್ತು. ಚಿತ್ರ ೨ರಲ್ಲಿ ಕಾಣುವಂತಹ ಕೋಡ್ ನಿಮ್ಮ ಕರ್ಸರ್ ಬಳಿ ಸೇರಿಕೊಳ್ಳುತ್ತದೆ. ಜೊತೆಗೆ ನಿಮ್ಮ ಪುಟದಲ್ಲಿ references ಎಂಬ ಕೋಡ್ ಉಲ್ಲೇಖಗಳು ವಿಭಾಗದಲ್ಲಿದ್ದರೆ, ಪುಟವನ್ನು ಸೇವ್ ಮಾಡಿದಾಗ ಚಿತ್ರ ೧ರಲ್ಲಿ ಕಾಣುವಂತೆ ನಿಮಗೆ ಪಠ್ಯ ಕಂಡು ಬರುತ್ತದೆ. 
ಇದೇ ಉಲ್ಲೇಖವನ್ನು ಮೂರು ನಾಲ್ಕು ಕಡೆ ಉಪಯೋಗಿಸಬೇಕಿದ್ದಲ್ಲಿ, ಮತ್ತೆ ಮತ್ತೆ ಅದನ್ನು ಸೇರಿಸುವ ಅವಶ್ಯಕತೆ ಇಲ್ಲ. ಪ್ರೂವ್ ಇಟ್ ಬಟನ್ ಮತ್ತೆ ಕ್ಲಿಕ್ ಮಾಡಿ ಎಲ್ಲಿ ಬೇಕೋ ಅಲ್ಲಿ ಕರ್ಸರ್ ಇಟ್ಟು  ನಿಮಗೆ ಬೇಕಾದ, ಪುಟದಲ್ಲಿ ಈಗಾಗಲೇ ಸೇರಿಸಿರುವ ರೆಫರೆನ್ಸ್ ಅನ್ನು ಸೇರಿಸುವ ಅವಕಾಶವನ್ನು ಈ ಗ್ಯಾಜೆಟ್ ಮಾಡಿಕೊಡುತ್ತದೆ. ಉದಾಹರಣೆಗೆ: ಒಬ್ಬ ಲೇಖಕ, ಎಲ್ಲಿ ಹುಟ್ಟಿದ್ದು, ಬೆಳದದ್ದು, ಹುಟ್ಟಿದ ದಿನಾಂಕ, ಓದು, ಎಲ್ಲದಕ್ಕೂ ಒಂದು ಪುಸ್ತಕ ಅಥವಾ ಪತ್ರಿಕೆಯ ಸುದ್ದಿ ಉಲ್ಲೇಖವಾಗಿ ಬಳಸಬಹುದು ಎಂದಾದರೆ, ಎಲ್ಲೆಲ್ಲಿ ಹುಟ್ಟಿದ ದಿನಾಂಕ, ಸ್ಥಳ ಇತ್ಯಾದಿ ಬಳಸುತ್ತೀರೋ, ಆಯಾ ಸ್ಥಳಗಳಲ್ಲಿ ಈ ಉಲ್ಲೇಖವನ್ನು ಮತ್ತೆ ಇನ್ಸರ್ಟ್ ಮಾಡಿದರಾಯ್ತು. ಇದು ಪೂರ್ಣ ರೆಫರೆನ್ಸ್ ಕೋಡ್ ಅನ್ನು ಚಿತ್ರ ೨ರಲ್ಲಿ ಇರುವಂತೆ ಮತ್ತೆ ಮತ್ತೆ ಎಲ್ಲೆಡೆ ಸೇರಿಸದೆ,  ಎಂದು ಉಲ್ಲೇಖಗಳು ಓದಲು ಸುಲಭವಾಗುವಂತೆ ಸೇರುತ್ತದೆ. 

ಈ ಗ್ಯಾಜೆಟ್ ಬಳಸಿ ವಿಕಿಪೀಡಿಯದ ಎಲ್ಲ ಲೇಖನಗಳ ಎಲ್ಲ  ಮಾಹಿತಿಗಳಿಗೆ ಅವಶ್ಯವಿರುವ ಉಲ್ಲೇಖಗಳನ್ನು ನೀಡುವ ಮೂಲಕ, ಲೇಖನಗಳನ್ನು ನಂಬಲು ಅರ್ಹವನ್ನಾಗಿಸಿ.