೧೧ ಮತ್ತು ೧೨ನೇ ಶತಮಾನದ, ಕನ್ನಡದ ಅತಿ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲೊಂದಾದ ವಚನ ಸಾಹಿತ್ಯವನ್ನು ನಮ್ಮ ‘ವಚನ ಸಂಚಯ‘ ತಂಡ ನಿಮ್ಮ ಮುಂದೆ ತಂದಿರುವುದು ನಿಮಗೆ ತಿಳಿದೇ ಇದೆ. ಇದನ್ನು ದಿನ ನಿತ್ಯ ಎಲ್ಲರಿಗೆ ತಲುಪಿಸುವ ಕೆಲಸ ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕವೂ ನೆಡೆದಿದೆ. ಪ್ರಾಯೋಗಿಕವಾಗಿ ಇದನ್ನು ವರ್ಡ್‌ಪ್ರೆಸ್ ಬಳಸುವ ಎಲ್ಲ ಕನ್ನಡ ಬ್ಲಾಗಿಗರೂ ತಮ್ಮ ಬ್ಲಾಗ್‌ಗಳಲ್ಲಿ ಬಳಸುವಂತಾಗಲು ಈ ಪ್ಲಗಿನ್‌ ಅನ್ನು ಅಭಿವೃದ್ದಿ ಪಡಿಸಲಾಗಿರುತ್ತದೆ. ಆಸಕ್ತರು ಇದನ್ನು ಡೌನ್‌ಲೋಡ್ ಮಾಡಿ ನಿಮ್ಮ ವರ್ಡ್‌ಪ್ರೆಸ್ ಬ್ಲಾಗ್‌ಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಇನ್ಸ್ಟಾಲ್ ಆದ ನಂತರ, Appearance -> Widgets ಗೆ ನುಗ್ಗಿ, ಅಲ್ಲಿ ಕಾಣುವ ವಚನ ಸಂಚಯ ಡೈಲಿ ವಚನ ವಿಡ್‌ಗೆಟ್ ಅನ್ನು ನಿಮ್ಮ ಸೈಡ್ ಬಾರಿಗೆ ಎಳೆದು ಹಾಕಿ. ಬೇಕಿದ್ದಲ್ಲಿ, ವಿಡ್‌ಗೆಟ್ ನ ಹಣೆಪಟ್ಟಿಯ ಹೆಸರನ್ನು ಬದಲಿಸಬಹುದು.

screenshot-3

screenshot-2
screenshot-4

ಮುಂಬರುವ ದಿನಗಳಲ್ಲಿ ವರ್ಡ್‌ಪ್ರೆಸ್ ಪ್ಲಗಿನ್ ಡೈರೆಕ್ಟರಿಯಲ್ಲಿ ಇದನ್ನು ನೇರವಾಗಿ ಹುಡುಕಲೂ ಸಿಗುತ್ತದೆ. Plugins -> Add New ನಲ್ಲಿ Vachana ಅಥವಾ Vachana Sanchaya ಹುಡುಕಿದರೆ. ಈ ಪ್ಲಗಿನ್ ಸ್ಥಾಪಿಸಿಕೊಳ್ಳಲು ವರ್ಡ್‌ಪ್ರೆಸ್‌ನಲ್ಲೀಗ ಸುಲಭ. ನೇರವಾಗಿ ಪ್ಲಗಿನ್ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ. ಈ ವರ್ಡ್‌ಪ್ರೆಸ್ ಪ್ಲಗಿನ್‌ ಅನ್ನು ಉತ್ತಮ ಪಡಿಸುವ ಇಚ್ಛೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ ಅಥವಾ ಗಿಟ್‌ಹಬ್‌ನಲ್ಲಿರುವ ಈ ಯೋಜನೆಯನ್ನು ಒಂದಷ್ಟು ತಡಕಾಡಿ.
ವಿಶೇಷ: ಈ ಪ್ಲಗಿನ್‌ ಅನ್ನು ಬರೆಯಲು ಸಹಾಯಕವಾಗಿದ್ದು, ಪ್ರಸನ್ನ ಎಸ್.ಪಿ ಬರೆದಿರುವ ಕಗ್ಗದ ವರ್ಡ್‌ಪ್ರೆಸ್ ಪ್ಲಗಿನ್. ಅವರಿಗೆ ಧನ್ಯವಾದಗಳು.
ಡೌನ್‌ಲೋಡ್

Creative Commons Licenseಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License. Based on a work at linuxaayana.net. Permissions beyond the scope of this license may be available at http://linuxaayana.net